ಬಜತ್ತೂರು: ಸರಕಾರದಿಂದ ಮಂಜೂರಾದ ಜಮೀನು ಅತಿಕ್ರಮಣ ತೆರವಾಗದಿದ್ದಲ್ಲಿ ಬೇಲಿ ಹಾಕುವುದಾಗಿ ಎಚ್ಚರಿಕೆ

0


ಪುತ್ತೂರು: ಸರಕಾರದಿಂದ ನನಗೆ ಮಂಜೂರಾದ ಡಿಸಿ ಮನ್ನಾ ಜಮೀನಲ್ಲಿ ನಿರ್ಮಾಣ ಮಾಡಿಕೊಂಡ ಮನೆಗಳಿಗೆ 94 ಸಿ ಮೂಲಕ ಸಾರ್ವಜನಿಕರಿಗೆ ಮಂಜೂರೂಗೊಳಿಸಿರುವುದು ಎಸ್ಸಿ ಎಸ್ಟಿ ಕಾಯ್ದೆಗೆ ವಿರೋಧವಾಗಿದೆ. ಈ ಕುರಿತು ಹಲವು ಭಾರಿ ಮನವಿ ನೀಡಲಾಗಿದೆ. ಯಾರು ಸ್ಪಂಧಿಸದ ಹಿನ್ನೆಲೆಯಲ್ಲಿ ಮಾ.23ರಂದು ನನ್ನ ಹಕ್ಕಿನ ಜಮೀನಿಗೆ ತಂತಿ ಬೇಲಿ ಹಾಕುವುದಾಗಿ ಬಜತ್ತೂರು ಗ್ರಾಮದ ಬೆದ್ರೋಡಿಯ ಚೀಂಕ್ರ ಮೇರ ಅವರು ಸುದ್ದಿಗೋಷ್ಟಿಯಲ್ಲಿ ತನ್ನ ಅಳಿಯ ಅಣ್ಣು ಜೊತೆ ಎಚ್ಚರಿಕೆ ನೀಡಿದ್ದಾರೆ.


ನನಗೆ ಸರಕಾರದಿಂದ ಪುತ್ತೂರು ತಾಲೂಕು ತಹಶೀಲ್ದಾರ್ ಕಚೇರಿಯು ಎಸ್‌ಸಿ ಎಸ್ಟಿ 162/86-87 ದಿನಾಂಕ 07-0601969ರಂತೆ ಬಜತ್ತೂರು ಗ್ರಾಮದ ಸರ್ವೆ ನಂ 4/1ರಲ್ಲಿ 0.86 ಎಕ್ರೆ ಮತ್ತು ಸರ್ವೆ ನಂ 399/1 ಬಿ ಯಲ್ಲಿ 1.52 ಎಕ್ರೆ (ಸಾಗುವಳಿ ಚೀಟಿಯ ಪ್ರಕಾರ 1-10 ಎಕ್ರೆ ಪಹಣಿ ಪ್ರಕಾರ) ಆಸ್ತಿಯ ದರ್ಖಾಸು ಮಂಜೂರಾಗಿದೆ. ಈ ಆಸ್ತಿಯು ನನ್ನ ಹೆಸರಿನಲ್ಲಿ ಮಂಜೂರಾಗಿ 37 ವರ್ಷ ಕಳದಿದೆ. ಆದರೆ ನನಗೆ ಮಂಜೂರಾದ ಜಮೀನಿನಲ್ಲಿ 9 ಮನೆಗಳು ಮತ್ತು ದಫನ ಭೂಮಿಯೂ ಇದೆ. ಈ ಕುರಿತು ಮನೆ ಕಟ್ಟುವಾಗಲೇ ನಾನು ಅವರಲ್ಲಿ ಇಲ್ಲಿ ನನ್ನ ಜಾಗ ಇದೆ. ಮನೆ ತೆರವು ಮಾಡುವಂತೆ ತಿಳಿಸಿದ್ದೆ. ಆದರೆ ಅವರು ಯಾರು ಅದಕ್ಕೆ ಗಮನ ಕೊಡಲಿಲ್ಲ. ನನಗೂ ವಿದ್ಯಾಭ್ಯಾಸದ ಕೊರತೆಯಿಂದಾಗಿ ಸಮಸ್ಯೆ ಆಗಿತ್ತು. ಇದೀಗ ನನ್ನ ಅಳಿಯನ ಮೂಲಕ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿ ಆಗಿದೆ. ಯಾವ ಸ್ಪಂದನೆಯೂ ಸಿಗದ ಹಿನ್ನೆಲೆಯಲ್ಲಿ ಮಾ.23ರಂದು ನನ್ನ ಹಕ್ಕಿನ ಜಮೀನಿಗೆ ಬೇಲಿ ಹಾಕುತ್ತೇವೆ. ಈ ಸಂದರ್ಭ ನನಗೆ ನನ್ನ ಕುಟುಂಬಕ್ಕೆ ಅತಿಕ್ರಮಣಕಾರರಿಂದ ತೊಂದರೆ ಅನಾಹುತಗಳು ಉಂಟಾದಲ್ಲಿ ಇದಕ್ಕೆ ನೇರವಾಗಿ ತಹಶೀಲ್ದಾರ್ ಮತ್ತು ಈ ಭಾಗದ ಶಾಸಕರು ಹೊಣೆಯಾಗಲಿದ್ದಾರೆ ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here