ನ.1 : ಪುರುಷರಕಟ್ಟೆ ಟೈ ಬ್ರೇಕರ‍್ಸ್ ಯುವಕ ವೃಂದದಿಂದ ವಿಶೇಷ ಕನ್ನಡ ಗ್ರಾಮೋತ್ಸವ

0

ತಾಲೂಕಿನ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕನ್ನಡ ಸ್ಪರ್ಧೆ
ನಾಲ್ಕು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಕನ್ನಡ ಸಾಂಸ್ಕೃತಿಕ ವೈಭವ

ಪುತ್ತೂರು:ಜನ ಮನದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ನಾಡು ನುಡಿಯ ಬಗೆಗಿನ ಅಭಿಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟೈ ಬ್ರೇಕರ್ಸ್ ಯುವಕ ವೃಂದ ಪುರುಷರಕಟ್ಟೆ ಇದರ ವತಿಯಿಂದ ವಿಶೇಷ ಕನ್ನಡ ಗ್ರಾಮೋತ್ಸವ ಕಾರ್ಯಕ್ರಮವು ನ.1ರಂದು ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ನಡೆಯಲಿದೆ ಯುವಕ ವೃಂದದ ಅಧ್ಯಕ್ಷ ಸತೀಶ್ ಪುರುಷರಕಟ್ಟೆ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ಪ್ರಾರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಟೈ ಬ್ರೇಕರ್ಸ್ ಯುವಕ ವೃಂದದ ಸ್ಥಾಪಕ ಅಧ್ಯಕ್ಷ ಶ್ರೀನಿವಾಸ ರಾವ್ ಇವರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜದ ವಿವಿದ ಗಣ್ಯರು ಅತಿಥಿಳಾಗಿ ಭಾಗವಹಿಸಲಿದ್ದಾರೆ.


ನಂತರ ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕನ್ನಡ ಪಠ್ಯ ಗಾಯನ, ನಾನು ಓದಿದ ಪುಸ್ತಕ ಹಾಗೂ ಕನ್ನಡ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ. ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಮಕ್ಕಳಿಗೆ ಕನ್ನಡ ನಾಡು ನುಡಿಯ ಬಗೆಗಿನ ವೇಷ ಭೂಷಣ ಸ್ಪರ್ಧೆಗಳು ನಡೆಯಲಿವೆ. ಅಪರಾಹ್ನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಅಕ್ಷಯ ಕಾಲೇಜ್ ಸಂಪ್ಯ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಸರಸ್ವತಿ ವಿದ್ಯಾ ಮಂದಿರ ಪುರುಷರಕಟ್ಟೆ ಹಾಗೂ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ವೀರಮಂಗಲ ಇಲ್ಲಿನ ವಿದ್ಯಾರ್ಥಿಗಳಿಂದ ವಿಶೇಷ ಕನ್ನಡ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.


ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಟೈ ಬ್ರೇಕರ್ಸ್ ಯುವಕ ವೃಂದದ ಅಧ್ಯಕ್ಷ ಸತೀಶ್ ಪುರುಷರಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಇದರ ನಿಕಟ ಪೂರ್ವ ಅಧ್ಯಕ್ಷ ಡಾ| ವರದರಾಜ ಚಂದ್ರಗಿರಿಯವರು ಕನ್ನಡ ನಾಡು ನುಡಿಯ ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ನಿಕಟಪೂರ್ವ ಶಾಸಕ ಸಂಜೀವ ಮಠಂದೂರು, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಸುರೇಶ್, ಅಕ್ಷಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯನಿ ಆಶಾ ಬೆಳ್ಳಾರೆ, ನರಿಮೊಗರು ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್, ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕೀರಿ, ವೀರಮಂಗಲ ಪಿಎಂ ಶ್ರೀ ಶಾಲಾ ಮುಖ್ಯಗುರು ತಾರನಾಥ್ ಸವಣೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಪುತ್ತೂರು ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರುಗಳಾದ ಪ್ರಶಾಂತ್ ಅನಂತಾಡಿ ಕೊಂಬೆಟ್ಟು ಜೆಸ್ಸಿ ವಿ.ಪಿ. ಕೆಯ್ಯೂರು, ಮಲ್ಲೇಶಯ್ಯ ಕಣಿಯಾರಬೈಲು, ಜಗನ್ನಾಥ್ ಅರಿಯಡ್ಕ ಕೊಂಬೆಟ್ಟು ಸುಚೇತ್ ಸುಳ್ಯ ಸಾಂದೀಪನಿ, ಶ್ರೀಕಾಂತ್ ನಾಯಕ್ ಕಂಬಳಕೋಡಿ, ಶುಭ ರಾವ್ ಬೆಟ್ಟಂಪಾಡಿ, ವೀಣಾ ಜಗದೀಶ್ ಕುದ್ಮಾರು, ಶೀಲತಾ ಸುಹಾಸ್ ಕೆಯ್ಯೂರು ಮುಂತಾದವರು ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಐದು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಮೂಲಕ ಗೌರವಿಸಲಾಗುವುದು.


ಅಕ್ಷಯ ಕಾಲೇಜು ಸಂಪ್ಯ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಸರಸ್ವತಿ ವಿದ್ಯಾಮಂದಿರ ಪುರುಷರಕಟ್ಟೆ ಹಾಗೂ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ವೀರಮಂಗಲ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಅವರು ಹೇಳಿದರು.


ಸುಣ್ಣದ ಬೊಟ್ಟು ನಾಟಕ ಪ್ರದರ್ಶನ;
ಸಮಾರೋಪ ಸಮಾರಂಭದ ಬಳಿಕ ದೇವದಾಸ್ ಕಾಪಿಕಾಡ್ ಅವರ ಚಾ ಪರ‍್ಕ ಕಲಾವಿದರಿಂದ ‘ಸುಣ್ಣದ ಬೊಟ್ಟು’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸತೀಶ್ ಪುರುಷರಕಟ್ಟೆ ಹೇಳಿದರು.
ಟ್ರೈ ಬ್ರೇಕರ‍್ಸ್ ಯುವಕ ವೃಂದದ ಮಾಜಿ ಅಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಪದಾಧಿಕಾರಿಗಳಾದ ಭವಿತ್ ಪುರುಷರಕಟ್ಟೆ ಹಾಗೂ ಸಂತೋಷ್ ಬುಳೇರಿಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here