ನಿವೃತ್ತ ನೌಕರರಿಂದ ಕಾರ್ಪೋರೇಶನ್ ಬ್ಯಾಂಕಿನ 121ನೇ ಸ್ಥಾಪನಾ ದಿನಾಚರಣೆ

0


ಪುತ್ತೂರು: ಕಾರ್ಪೋರೇಶನ್ ಬ್ಯಾಂಕ್ ಯೂನಿಯನ್‌ನೊಂದಿಗೆ ವಿಲೀನಗೊಂಡರು ಆಗಿನ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ನಿವೃತ್ತಗೊಂಡ ನೌಕರರರು, ಹಾಲಿ ನೌಕರರು ಸಹಭಾಗಿತ್ವದಲ್ಲಿ ಕಾರ್ಪೋರೇಶನ್ ಬ್ಯಾಂಕ್‌ನ 121ನೇ ಸ್ಥಾಪನಾ ದಿನಾಚರಣೆ ಮಾ.12ರಂದು ಪುತ್ತೂರು ಮಾತೃ ಛಾಯಾ ಸಭಾ ಭವನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಬ್ಯಾಂಕಿನ ಸ್ಥಾಪಕರಾದ ಖಾನ್ ಬಹದ್ದೂರ್ ಹಾಜಿ, ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹದ್ದೂರ್ ರವರ ದೂರದರ್ಶಿತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸುಲೇಖ ವಾರದಾರಜ್‌ರವರು ಮಾನಸಿಕ, ದೈಹಿಕ ಸ್ವಾಸ್ಥ್ಯಕ್ಷೇಮದ ಬಗ್ಯೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಗಣೇಶ್ ರಾವ್ ನಿರ್ವಹಿಸಿದರು ಹಾಗೂ ಈಶ್ವರ್ ಬೆಡೇಕರ್, ಬಾಲಕೃಷ್ಣ ನಾಯ್ಕ್, ಸತೀಶ್ ರಾವ್, ಗೋಪಾಲಕೃಷ್ಣ ಭಟ್ ಸಹಕರಿದರು. ಕಾರ್ಯಕ್ರಮದಲ್ಲಿ ಹಾಲಿ ಸೇವೆಯಲ್ಲಿರುವ ಹಾಗೂ ಸೇವಾ ನಿವೃತ್ತರಾದ ಸುಮಾರು 45 ನೌಕರರು ಭಾಗವಹಿಸಿದರು.


ಕಾರ್ಪೋರೇಶನ್ ಬ್ಯಾಂಕ್ ಅವಿಭಜಿತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್. ಇದು 1906 ರ ಮಾರ್ಚ್ 12 ರಂದು ಸ್ಥಾಪಿತಗೊಂಡು ಮಾರ್ಚ್ 31, 2020 ರಲ್ಲಿ ಭಾರತ ಸರ್ಕಾರದ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಪ್ರಕ್ರಿಯೆಯಲ್ಲಿ ಯೂನಿಯನ್ ಬ್ಯಾಂಕ್ ಓಫ್ ಇಂಡಿಯಾದೊಂದಿಗೆ ವಿಲೀನವಾಗಿ 115 ವರ್ಷಗಳ ಸೇವೆಯನ್ನು ನಮ್ಮ ದೇಶಕ್ಕೆ ಹಾಗೂ ವಿಶೇಷವಾಗಿ ನಮ್ಮ ಜಿಲ್ಲೆಗೆ ನೀಡಿತು. 2000ನೇ ದಶಕದಲ್ಲಿ ಭಾರತದ ನಂ.1 ಬ್ಯಾಂಕ್ ಎಂದು ಹಲವು ಬಾರಿ ಪ್ರಶಸ್ತಿ ಗಳಿಸಿತ್ತು.

LEAVE A REPLY

Please enter your comment!
Please enter your name here