ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್‌ ಪುರುಷರ ಡೆಕಾಥ್ಲಾನ್ ಸ್ಪರ್ಧೆ : ಇನ್ಸ್‌ಪೆಕ್ಟರ್ ಸವಣೂರು ನಡುಬೈಲಿನ ಅಭಿಷೇಕ್ ಶೆಟ್ಟಿ ಅವರಿಗೆ ಚಿನ್ನದ ಪದಕ

0

ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್

ಸವಣೂರು : ಪಂಜಾಬ್‌ನ ಜಲಂಧರ್‌ನಲ್ಲಿ ಮಾರ್ಚ್ 7ರಿಂದ 12ರವರೆಗೆ ನಡೆದ 74ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್‌ ಪುರುಷರ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಕರ್ನಾಟಕದ ಇನ್ಸ್‌ಪೆಕ್ಟರ್ ಸವಣೂರಿನ ನಡುಬೈಲಿನ ಅಭಿಷೇಕ್ ಶೆಟ್ಟಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಅಭಿಷೇಕ್ ಶೆಟ್ಟಿ ಭಾಜನರಾಗಿದ್ದಾರೆ ಎಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.

ಹತ್ತು ಕ್ರೀಡೆಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಒಟ್ಟಾರೆ 6709 ಅಂಕಗಳನ್ನು ಕಲೆಹಾಕಿ ಮೊದಲ ಸ್ಥಾನ ಗಳಿಸಿದರು. ಇವರು ಕಡಬ ತಾಲೂಕಿನ ಸವಣೂರು ಗ್ರಾಮದ ನಡುಬೈಲಿನವರು.

LEAVE A REPLY

Please enter your comment!
Please enter your name here