






ಪುತ್ತೂರು : . ಕರ್ನಾಟಕ ಸರ್ಕಾರ.ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಸವಣೂರು ಇವರ ಸಂಯುಕ್ತ ಆಶ್ರಯದಲ್ಲಿ ಸವಣೂರು ಮತ್ತು ಕಾಣಿಯೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರ ಒಂದು ದಿನದ ತರಬೇತಿ ಕಾರ್ಯಾಗಾರ ಸವಣೂರು ಯುವ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆ ಉದ್ಘಾಟಿಸಿ ಮಾತನಾಡಿ ಪ್ರತಿ ವರ್ಷ ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಸುವುದರಿಂದ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ನಿಂಗರಾಜು ಕೆ ಪಿ ವಹಿಸಿದ್ದರು. ವೇದಿಕೆಯಲ್ಲಿ ಸವಣೂರು ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಬೆಳಂದೂರು ಶಾಲಾ ಮುಖ್ಯ ಗುರು ಜಾನಕಿ ಕೆ ಆರ್ ಕುದ್ಮಾರು ಶಾಲಾ ಮುಖ್ಯ ಗುರು ಮಿನಿ ವರ್ಗೀಸ್ ಬೊಬ್ಬೆಕೇರಿ ಶಾಲಾ ಮುಖ್ಯ ಗುರು ಶಶಿಕಲಾ ನಾಣಿಲ ಶಾಲಾ ಮುಖ್ಯ ಗುರು ಪದ್ಮಯ್ಯ ಗೌಡ ಚಾರ್ವಾಕ ಶಾಲಾ ಮುಖ್ಯ ಗುರು ರಾಮೇಶಿ ಎಸ್ ಉಪಸ್ಥಿತರಿದ್ದರು.
ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ ಪ್ರಾಸ್ತಾವಿಕ ಮಾತನಾಡಿದರು.ಪಳ್ಳತ್ತಾರು ಶಾಲಾ ಮುಖ್ಯ ಗುರು ರಂಗನಾಥ್ ಸಿ ಸ್ವಾಗತಿಸಿ ಪುಣ್ಚಪ್ಪಾಡಿ ಶಾಲಾ ಮುಖ್ಯ ಗುರು ರಶ್ಮಿತಾ ಜೈನ್ ನರಿಮೊಗರು ವಂದಿಸಿದರು.ಕುಮಾರಮಂಗಲ ಶಾಲಾ ಮುಖ್ಯ ಗುರು ಸಂತೋಷ್ ಎನ್ ಟಿ ನಿರೂಪಿಸಿದರು










