







ಪುತ್ತೂರು: ಚಂಡೀಗಢ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಾದು ಹೋಗುವ 550ಕಿ.ಮೀ ದೂರದ ಕಠಿಣವಾದ ರಸ್ತೆಯಲ್ಲಿ ನಡೆದ ಸಜೋಬಾ ಬೈಕ್ ರ್ಯಾಲಿಯ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450ಸಿಸಿ ವಿಭಾಗದಲ್ಲಿ ಬೊಳುವಾರು ರಾಯಲ್ ಎನ್ಫಿಲ್ಡ್ ಶೋ.ರೂಂನ ಮ್ಹಾಲಕ ಆಕಾಶ್ ಐತಾಳ್ ದ್ವಿತೀಯ ಸ್ಥಾನ ಪಡೆದುಕೊಂಡರು.



ಮಾ.13ರಿಂದ 15ರ ತನಕ ನಡೆದ ರ್ಯಾಲಿಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 60 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ದೇಶದ ಅತೀ ಕಠಿಣವಾದ ಕಲ್ಲು, ಬಂಡೆ, ಗುಡ್ಡಗಾಡು, ನದಿ ತಟಗಳು, ಮರಳುಗಳಿಂದ ಕೂಡಿದ 550ಕಿ.ಮೀ ದೂರದ ರಸ್ತೆಯಲ್ಲಿ ರ್ಯಾಲಿ ಆಯೋಜನೆಗೊಂಡಿತ್ತು. ಮಾ.13ರಂದು ಪ್ರಾರಂಭಗೊಂಡ ರ್ಯಾಲಿಯು ಮಾ.15ರಂದುಪೂರ್ಣಗೊಂಡಿತ್ತು. ಭಾಗವಹಿಸಿದ್ದ 60ಮಂದಿ ಸ್ಪರ್ಧಿಗಳಲ್ಲಿ ಕೇವಲ 30 ಮಂದಿ ಮಾತ್ರ ಕಠಿಣ ಹಾಗೂ ಒರಟಾದ ರಸ್ತೆಯಲ್ಲಿ ಸವಾರಿ ಮಾಡಿ ರ್ಯಾಲಿಯನ್ನು ಪೂರ್ಣಗೊಳಿಸಿದ್ದರು. ಈ ರ್ಯಾಲಿಯಲ್ಲಿ ಆಕಾಶ್ ಐತಾಳ್ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು.



2022ರ ಸಜೋಬಾ ರ್ಯಾಲಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದ ಆಕಾಶ್ ಐತಾಳ್ ಈ ಬಾರಿ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಇವರು ರಾಷ್ಟ್ರೀಯ ಚಾಂಪಿಯನ್ ಸ್ಪ್ರಿಂಟ್ ರ್ಯಾಲಿಯಲ್ಲಿ 3 ಬಾರಿ ಚಾಂಪಿಯನ್ ಆಗಿದ್ದಾರೆ.










