







ಇಲ್ಲಿಯವರೆಗೆ 164 ವಿದ್ಯಾರ್ಥಿಗಳು ಆಯ್ಕೆ


ಪುತ್ತೂರು : ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 2025-26ನೇ ಸಾಲಿನ ಡಿ.13 ರಂದು ನಡೆದ ಜವಾಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ ತರಬೇತುಗೊಂಡ 2 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.



ಒಳಮೊಗ್ರು ಗ್ರಾಮದ ಕಲ್ಲಡ್ಕ ನಿವಾಸಿ ದಿನೇಶ್ ರೈ ಕೆ ಹಾಗೂ ದೀಪಾ ಬಿ ಶೆಟ್ಟಿ ದಂಪತಿಗಳ ಪುತ್ರನಾದ ಲವೀಶ್ ರೈ ಕೆ ಇವರು ನವೋದಯ ಪ್ರವೇಶ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದು ಆಯ್ಕೆಯಾಗಿರುತ್ತಾರೆ. ಪುತ್ತೂರು ತಾಲೂಕು ಶಾಂತಿಗೋಡು ನಿವಾಸಿಯಾಗಿರುವ ಬಾಲಚಂದ್ರ ಕೆ ಹಾಗೂ ಪ್ರಮೀಳಾ ದಂಪತಿಗಳ ಪುತ್ರಿಯಾದ ಸ್ವಸ್ತಿ ಬಿ ಕೆ ಇವರು 47 ನೇ ರ್ಯಾಂಕ್ ಪಡೆದು ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಸಂಚಾಲಕ ಗೋಕುಲ್ನಾಥ್ ಪಿ.ವಿ. ತಿಳಿಸಿದ್ದಾರೆ.
2026-27 ನೇ ಸಾಲಿನ ಜವಹಾರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ತರಬೇತಿ ಶಿಬಿರವು ಇದೇ ಬರುವ ಏಪ್ರೀಲ್ 5 ರಿಂದ ಪ್ರಾರಂಭಗೊಂಡು ಮುಂದಿನ ಪರೀಕ್ಷೆಯವರೆಗೆ ತರಗತಿಗಳು ಎರಡು ಹಂತದಲ್ಲಿ ನಡೆಯಲಿದೆ. ಬೇಸಿಗೆ ರಜಾ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ 9.30 ರಿಂದ ಸಂಜೆ 3.30 ರವರೆಗೆ, ಶಾಲೆಗಳು ಪ್ರಾರಂಭವಾದ ಬಳಿಕ ಪ್ರತಿ ಆದಿತ್ಯವಾರದಂದು ನಡೆಸಲಾಗುವುದು ಎಂದು ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಸ್ಥೆಯ ಕಛೇರಿಗೆ ಮಖತಃ ಅಥವಾ ದೂರವಾಣಿ ಮುಖಾಂತರ ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.ದೂರವಾಣಿ ಸಂಖ್ಯೆ: 9900109490, 8123899490










