






ಪುತ್ತೂರು : ಸವಣೂರು ಬೊಳ್ಳಿ ಬೊಲ್ಪು ತುಳು ಕೂಟ ಸಂಸ್ಥೆಯ 2026 – 28 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಾಮಾಜಿಕ ಮುಂದಾಳು ಸತೀಶ್ ಬಲ್ಯಾಯ ಕನ್ನಡಕುಮೇರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸವಣೂರು ಯುವ ಸಭಾ ಸಭಾಭವನದಲ್ಲಿ ಜರಗಿದ ಮಹಾಸಭೆಯು ಸಂಸ್ಥೆಯ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಸ್ಥೆಯ ಪೂರ್ವ ಅಧ್ಯಕ್ಷ, ಪುತ್ತೂರು ಸುದ್ದಿ ಬಿಡುಗಡೆ ವರದಿಗಾರ ಉಮಾಪ್ರಸಾದ್ ರೈ ನಡುಬೈಲುರವರು ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.


ಪದಾಧಿಕಾರಿಗಳ ವಿವರ :
ಗೌರವಾಧ್ಯಕ್ಷ- ಗಿರಿಶಂಕರ್ ಸುಲಾಯ ದೇವಸ್ಯ, ಅಧ್ಯಕ್ಷ – ಸತೀಶ್ ಬಲ್ಯಾಯ ಕನ್ನಡಕುಮೇರು, ಉಪಾಧ್ಯಕ್ಷ- ಪ್ರಕಾಶ್ ಮಾಲೆತ್ತಾರು, ಕಾರ್ಯದರ್ಶಿ: ದಯಾನಂದ ಮೆದು, ಜೊತೆ ಕಾರ್ಯದರ್ಶಿ: ಗಂಗಾಧರ ಸುಣ್ಣಾಜೆ, ಕೋಶಾಧಿಕಾರಿ : ರಘು ಬೇರಿಕೆ , ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ, ಉಮಾಪ್ರಸಾದ್ ರೈ ನಡುಬೈಲು, ಸುಪ್ರೀತ್ ರೈ ಖಂಡಿಗ, ತಾರಾನಾಥ ಕಾಯರ್ಗ, ಸುರೇಶ್ ರೈ ಸೂಡಿಮುಳ್ಳು, ಮಹೇಶ್ ಕೆ.ಸವಣೂರು, ತಾರಾನಾಥ ಸವಣೂರು, ಚೇತನ್ ಕುಮಾರ್ ಕೋಡಿಬೈಲು, ರಾಮಕೃಷ್ಣ ಪ್ರಭು ಸವಣೂರು, ಪ್ರಭಾಕರ್ ಶೆಟ್ಟಿ ನಡುಬೈಲು, ಮೋಹನ್ ರೈ ಕೆರೆಕ್ಕೋಡಿ, ಕೀರ್ತನ್ ಕೋಡಿಬೈಲು, ಬಾಲಚಂದ್ರ ರೈ ಕೆರೆಕ್ಕೋಡಿ, ಜಯರಾಮ ರೈ ಮೂಡಂಬೈಲು, ಗಂಗಾಧರ ಪೆರಿಯಡ್ಕ, ಪ್ರಕಾಶ್ ರೈ ಸಾರಕರೆ ಹಾಗೂ ರಾಘವ ಗೌಡ ಸವಣೂರು ಅವರನ್ನು ಆಯ್ಕೆ ಮಾಡಲಾಯಿತು.



ಅಧ್ಯಕ್ಷ ಸತೀಶ್ ಬಲ್ಯಾಯ ಪರಿಚಯ
ಬೊಳ್ಳಿ ಬೊಲ್ಪು ತುಳು ಕೂಟದ ನೂತನ ಅಧ್ಯಕ್ಷ ಸತೀಶ್ ಬಲ್ಯಾಯ ರವರು ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಯುವ ಮುಖಂಡರಾಗಿದ್ದು, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾಗಿ, ಸವಣೂರು ಯುವಕ ಮಂಡಲ, ಸೇರಿದಂತೆ ಅನೇಕ ಸಂಘ – ಸಂಸ್ಥೆಯಲ್ಲಿ ದುಡಿದ ಅನುಭವ ಇದೆ, ಪ್ರಸ್ತುತ ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.










