






ನೆಲ್ಯಾಡಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಗ್ರಾಮದ ಗೋಳಿತ್ತೊಟ್ಟು ಜಂಕ್ಷನ್ನಲ್ಲಿ ಮಾ.16ರಂದು ರಾತ್ರಿ ನಡೆದಿದೆ.


ಗೋಳಿತ್ತೊಟ್ಟು ಇಂಡಿಯನ್ ಹೋಟೆಲ್ ಬಳಿ ಲಾರಿ ಚಾಲಕ ರಾಜಪ್ಪ ಎಂಬವರು ಲಾರಿಯನ್ನು ನಿಲ್ಲಿಸಿದ್ದು ಪಾರ್ಕಿಂಗ್ ಲೈಟ್ ಅಳವಡಿಸದೇ ಇದ್ದ ಕಾರಣ ಗೋಳಿತ್ತೊಟ್ಟು ನಿವಾಸಿ ಸಂದೀಪ್ ಎಂಬವರು ಗೊಳಿತ್ತೊಟ್ಟು ಕಡೆಯಿಂದ ನೆಲ್ಯಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಸವಾರ ಸಂದೀಪ್ ಹಾಗೂ ಸಹಸವಾರ ಗಾಯಗೊಂಡಿದ್ದಾರೆ. ಗಾಯಾಳುಗಳು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಗಾಯಾಳು ಸಂದೀಪ್ ಅವರ ಸಹೋದರ ಮೋಹನ್ ಜಿ.ಗೌಡ ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.













