ಮಹೇಶ್ ಕೆ.ಪಿ ಕಂಟ್ರಮಜಲು ಇವರಿಗೆ ಕರ್ನಾಟಕ ಸಾಹಿತ್ಯ ವಿದ್ಯಾ ರತ್ನ ಪ್ರಶಸ್ತಿ ಪ್ರದಾನ:

0

ಪುತ್ತೂರು: ಕರ್ನಾಟಕ ಸರ್ಕಾರದ ಮಾನ್ಯತೆ ಹೊಂದಿರುವ ಎ .ಜಿ.ಎಸ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು. ಇವರು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಸಂಸ್ಥೆಯಾಗಿದ್ದು, 2024-25 ನೇಯ ಶೈಕ್ಷಣಿಕ ಸಾಲಿನ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಮಹೇಶ್ ಕೆ. ಪಿ ಯವರು ಬೋಧಿಸುತ್ತಿರುವ ಕನ್ನಡ ವಿಷಯವು ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿದ್ದು, 98.22% ವಿಷಯ ಸರಾಸರಿ ಫಲಿತಾಂಶವನ್ನು ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ 75 ವಿದ್ಯಾರ್ಥಿಗಳಲ್ಲಿ, 30 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಹಾಗೂ 100 ಕ್ಕೆ 99 ಅಂಕವನ್ನು 14 ಮಂದಿ ವಿದ್ಯಾರ್ಥಿಗಳು ಮತ್ತು ಕನ್ನಡ ಪರೀಕ್ಷೆ ಬರೆದ ಎಲ್ಲಾ 75 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾಯ, ವಾಚ, ಮನಸ ದುಡಿಯುತ್ತಾ ಬಂದಿರುವ ಮಹೇಶ್. ಕೆ. ಪಿ ಯವರ ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಅವರಿಗೆ ಬೆಂಗಳೂರಿನಲ್ಲಿ ನಡೆದ ಎ .ಜಿ.ಎಸ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಐದನೇಯ ವಾರ್ಷಿಕ ಸಮಾರಂಭದಲ್ಲಿ ಗಣ್ಯ ಅತಿಥಿಗಳು , ಸಾಹಿತಿಗಳು ಹಾಗೂ ಚಲನಚಿತ್ರ ನಟರ ಸಮ್ಮುಖದಲ್ಲಿ ಕರ್ನಾಟಕ ಸಾಹಿತ್ಯ ವಿದ್ಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಪ್ರಸ್ತುತ ಇವರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು ಕಮ್ಮಾಜೆ, ಕಿನ್ನಿಗೋಳಿ ,ಮಂಗಳೂರು ಇಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಂಟ್ರಮಜಲು, ಶ್ರೀ ಪದ್ಮನಾಭ ಗೌಡ ಹಾಗೂ ಶ್ರೀಮತಿ ಯಶೋಧ ದಂಪತಿಗಳ ಸುಪುತ್ರ.

LEAVE A REPLY

Please enter your comment!
Please enter your name here