ಬೊಳುವಾರಿನಲ್ಲಿ ಯಕ್ಷಗಾನ ತಾಳಮದ್ದಳೆಯಲ್ಲಿ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಗೆ ನುಡಿನಮನ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಮಾ.21ರಂದು ನಡೆದ ಪಾಕ್ಷಿಕ ತಾಳಮದ್ದಳೆಯಲ್ಲಿ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಗೆ ನುಡಿನಮನ ಸಲ್ಲಿಸಲಾಯಿತು.


ದೇವಿದಾಸ ವಿರಚಿತ ” ಪಾರ್ಥ ಸಾರಥ್ಯ ” ಎಂಬ ಆಖ್ಯಾನದೊಂದಿಗೆ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ಶರಣ್ಯ ನೆತ್ತರಕೆರೆ ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್ ( ದುರ್ಯೋಧನ), ಗುಡಪ್ಪ ಬಲ್ಯ ( ಬಲರಾಮ ), ಪ್ರೇಮಲತಾ ರಾವ್ ಮತ್ತು ಅಚ್ಯುತ ಪಾಂಗಣ್ಣಾಯ (ಅರ್ಜುನ) ಸಹಕರಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ನಂತರ ಮಾ.20ರಂದು ಅಸ್ತಂಗತರಾದ ಯಕ್ಷ ಗುರು ದಶಾವತಾರಿ ಸೂರಿಕುಮೇರು ಕೆ.ಗೋವಿಂದ ಭಟ್ಟರಿಗೆ ಸಂಘದ ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ ನುಡಿ ನಮನ ಸಲ್ಲಿಸಿದರು. ಕಡಂಬಳಿಕೆ ಸತ್ಯನಾರಾಯಣ ಕೇಕುಣ್ಣಾಯ ಪ್ರಾಯೋಜಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಮತ್ತು ನಗರ ಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾಗೌರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here