







ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರ್ ಮಾಯ್ಕಾರೆ ಅಜ್ಜೆ ಕೊರಗತನಿಯ ಕ್ಷೇತ್ರದಲ್ಲಿ ಶನಿವಾರ ಹರಕೆಯ ಕೋಲ ನಡೆಯಿತು. ಹರೀಶ್ ಗೋಳಿತ್ತಡಿ ಕುಂಜೂರು ಪಂಜ ಅವರ ಹರಕೆ ನೇಮೋತ್ಸವದ ಸೇವಾಕರ್ತೃರಾಗಿದ್ದರು.
ದೈವ ನರ್ತಕ ದಾಮೋದರ ಎಂ. ಮಾಲಡ್ಕ ಅವರ ನೇತೃತ್ವದಲ್ಲಿ ಯೋಗೀಶ್ ದಂಬೆತ್ತಿಮಾರ್, ಬಾಲಕೃಷ್ಣ, ಸುರೇಶ್, ಹರೀಶ್, ನಾರಾಯಣ, ಸೇಸಪ್ಪ ನಾಯ್ಕ ವಿಧಿವಿಧಾನ ನಡೆಸಿಕೊಟ್ಟರು.
ಮುರಳೀಕೃಷ್ಣ ಹಸಂತ್ತಡ್ಕ, ಗಿರೀಶ್ ರೈ ಕೈಕಾರ, ಡಾ. ಸುರೇಶ್ ಪುತ್ತೂರಾಯ, ಡಾ. ಆಶಾಜ್ಯೋತಿ, ದೀಪಕ್ ರೈ, ಜಯಂತ್ ಶೆಟ್ಟಿ ಕಂಬಳತ್ತಡ್ಡ ಮೊದಲಾದವರು ಉಪಸ್ಥಿತರಿದ್ದರು.















