ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅಶೋಕ್ ರೈ ಚುನಾವಣಾ ಪ್ರಚಾರ, ಮತಯಾಚನೆ

0

ಪುತ್ತೂರು: ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್‌ ರವರು ಓರ್ವ ಅಭಿವೃದ್ದಿ ಚಿಂತನೆಯುಳ್ಳ ರಾಜಕಾರಣಿ, ಸರ್ವಧರ್ಮ ಹಾಗೂ ಸರ್ವಧರ್ಮಿಯರನ್ನು ಸಮಾನವಾಗಿ ಗೌರವದಿಂದ ಕಾಣುವ ಅವರು ಕಳೆದ ಐದು ವರ್ಷಗಳಿಂದ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಕೆಲಸ ಮಾಡಿದವರು ಇವರನ್ನು ಈ ಬಾರಿ ಮತ ಹಾಕುವ ಮೂಲಕ ಗೆಲ್ಲಿಸಬೇಕು ಇವರನ್ನು ಕಳೆದುಕೊಂಡಲ್ಲಿ ಮಂಜೇಶ್ವರದ ಜನತೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಎ ಕೆ ಎಂ ಅಶ್ರಫ್‌ರವರ ಪರ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಚುನಾವಣಾ ಪ್ರಚಾರ ಹಾಗೂ ಮತಯಾಚನೆ ನಡೆಸಿ ಮಾತನಾಡಿದರು. ಕ್ಷೇತ್ರದ ಪಳ್ಳಂ, ಉಕ್ಕಿನಡ್ಕ, ಬನ್ಪುತ್ತಡ್ಕ, ಕಜಂಬಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಪ್ರಚಾರ ನಡೆಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್‌ರವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಕೇರಳದಲ್ಲಿ ಎಲ್‌ಡಿಎಫ್ ಮಣ್ಣು ಮುಕ್ಕಲಿದೆ, ಕೇರಳದಲ್ಲಿಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಂಜೇಶ್ವರದಲ್ಲಿ ಯುಡಿಎಫ್ ಜಯಗಳಿಸಲಿದೆ. ಎಲ್ಲರನ್ನೊಳಗೊಂಂಡ ಸೌಹಾರ್ಧದ ಕೇರಳಕ್ಕಾಗಿ ಎ ಕೆ ಎಂ ಅಶ್ರಫ್‌ರವರನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.


ಶಾಸಕರ ಜೊತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕರ್ನಾಟಕ ರಾಜ್ಯ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಪಕ್ಷದ ಮುಖಂರಾದ ರಾಕೇಶ್ ರೈ ಕುದ್ಕಾಡಿ, ಬಶೀರ್ ಪರ್ಲಡ್ಕ, ನವೀನ್ ರೈ ಬನ್ನೂರು, ಅದ್ದುಪಡೀಲ್, ಹಕೀಂ ಬೊಳುವಾರು, ಕರೀಂ ಕುದ್ದುಪದವು, ಅಬ್ಬು ನವಗ್ರಾಮ, ಗರೀಶ್ ಸಂಟ್ಯಾರ್, ಸಲಾಂ ಸಂಪ್ಯ, ಮೋನುಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು. ಶಾಸಕರು ಅಂಗಡಿಗೆ, ಮನೆಗೆ ತೆರಳಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅಶೋಕ್ ರೈ ಚುನಾವಣಾ ಪ್ರಚಾರ, ಮತಯಾಚನೆ ನಡೆಸಿದರು.

LEAVE A REPLY

Please enter your comment!
Please enter your name here