ಶ್ರೀ ಕ್ಷೇತ್ರ ಕೆಯ್ಯೂರು ದೇವಿಯ ವರ್ಷಾವಧಿ ಜಾತ್ರೋತ್ಸವ – ನೇಮೋತ್ಸವ ಸಂಪನ್ನ

0

ಕೆಯ್ಯೂರು:  ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವವು ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆದು, ,ಮಾ.28ರಂದು ಬೆಳಿಗ್ಗೆ  ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ಶ್ರೀ ರಕ್ತೇಶ್ವರಿ,ಪಿಲಿಚಾಮುಂಡಿ ನೇಮ ನಡೆದು,ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು.

ಅಪರಾಹ್ನ ಕುಪ್ಪೆಪಂಜುರ್ಲಿ, ಗುಳಿಗ ದೈವದ ನೇಮ ನಡೆದು ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ , ಅನ್ನ ಸಂತಪಣೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಐವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಸದಸ್ಯರಾದ ಜಲಜಾಕ್ಷಿ ಎ.ರೈ ಸಾಗು, ಸುಜಯ ಕೆಯ್ಯೂರು,  ಅರ್ಚಕ ಶ್ರೀನಿವಾಸರಾವ್ ಕೆಯ್ಯೂರು ,ಉಮಾಕಾಂತ್ ಬೈಲಾಡಿ , ಅಶೋಕ್ ರೈ ದೇರ್ಲ,ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ ಇಳಂತಾಜೆ,.  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಇಳಾಂತಜೆ, ಮತ್ತು ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಎಂಟು ಬೈಲುವಾರು ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಗಳು,  ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ ,ಸದಸ್ಯರುಗಳು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಅಧ್ಯಕ್ಷರು, ಸದಸ್ಯರುಗಳು ,ಅರ್ಚಕ ವೃಂದ, ನೌಕರ ವೃಂದ, ಭಕ್ತಾದಿಗಳು,  ಸಹಕರಿಸುವ ಸಂಘ ಸಂಸ್ಥೆಗಳು ಮತ್ತು. ಊರ ಹತ್ತು  ‌ಸಮಸ್ತರು ಪಾಲ್ಗೊಂಡರು. 

LEAVE A REPLY

Please enter your comment!
Please enter your name here