ಪುತ್ತೂರಿನಲ್ಲಿ ‌ಆಟೋ ಎಲ್ ಪಿಜಿ ಕೊರತೆ-ಒಂದೇ ಪಂಪ್ ನಲ್ಲಿ ಲಭ್ಯತೆ- ಸಾಲುಗಟ್ಟಿ ನಿಂತ ಆಟೋಗಳು

0

ಪುತ್ತೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ‌ ಉಂಟಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರ ಜೊತೆಗೆ ‌ಈಗ ಆಟೊ ಎಲ್ ಪಿಜಿ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಪುತ್ತೂರಿನ ಬಹುತೇಕ ಎಲ್ ಪಿಜಿ ಸ್ಟೇಷನ್ ಗಳಲ್ಲಿ ಸ್ಟಾಕ್ ಖಾಲಿಯಾಗಿದ್ದು, ಬೊಳುವಾರಿನ ಲಿನೆಟ್ ಜಂಕ್ಷನ್ ಬಳಿ ಇರುವ ಪ್ರೊಪೆಲ್ ಗ್ಯಾಸ್ ಸ್ಟೇಷನ್ ನಲ್ಲಿ ಮಾತ್ರ ಆಟೋ ಎಲ್ ಪಿಜಿ ಲಭ್ಯವಿದ್ದ ಹಿನ್ನೆಲೆಯಲ್ಲಿ ಗ್ಯಾಸ್ ಫಿಲ್ ಮಾಡಿಕೊಳ್ಳಲು ಎಲ್ ಪಿಜಿ ಆಟೋಗಳು ಸಹಿತ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಲಿನೆಟ್ ಸರ್ಕಲ್ ಬಳಿಯಿಂದ ಮಂಜಲ್ಪಡ್ಪು ಸುದಾನ ಶಾಲೆಯವರೆಗೂ ರಸ್ತೆ ಬದಿಯಲ್ಲಿ ಆಟೋಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ‌ ಕಂಡುಬಂತು.

ಪುತ್ತೂರಿನಲ್ಲಿ ಐದಾರು ಆಟೋ ಎಲ್ ಪಿಜಿ ಗ್ಯಾಸ್ ಪಂಪ್ ಗಳಿದ್ದು ಬಹುತೇಕ ಎಲ್ಲಾ ಕಡೆ ಸ್ಟಾಕ್ ಖಾಲಿಯಾಗಿದೆ. ಹೀಗಾಗಿ ಎಲ್ಲಾ ಪಂಪ್ ಗಳು ಮುಚ್ಚಿದ್ದು, ಎಲ್ಲೂ ಆಟೋ ಗ್ಯಾಸ್ ಸಿಗುತ್ತಿಲ್ಲ. ಈ ನಡುವೆ ಪ್ರೊಪೆಲ್ ಗ್ಯಾಸ್ ಸ್ಟೇಷನ್‌ನಲ್ಲಿ ಗ್ಯಾಸ್ ಸಿಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪೆರ್ನೆ, ಉಪ್ಪಿನಂಗಡಿ, ಕಾಣಿಯೂರು‌ ಸಹಿತ ಹೊರ ಪ್ರದೇಶಗಳ ಆಟೋ ಚಾಲಕರೂ ಬೆಳಗ್ಗೆಯೇ ಬಂದು ಸಾಲುಗಟ್ಟಿ ನಿಂತಿದ್ದರು.

ಪ್ರೊಪೆಲ್ ನಲ್ಲಿ ಕೂಡ ಸ್ಟಾಕ್ ಖಾಲಿಯಾಗುತ್ತಾ ಬಂದಿದ್ದು, ಕೆಲ ಗಂಟೆಯಲ್ಲೇ ಸ್ಟಾಕ್ ಖಾಲಿಯಾಗಲಿದೆ ಎಂದು ಪಂಪ್‌ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here