







ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ -ಪೂರ್ವಭಾವಿ ಸಭೆ


ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಕಲಾ ಮಂದಿರ್ ಬೆಳ್ಳಾರೆ ಇವರ ಸಂಯೋಜನೆಯಲ್ಲಿ ರಾಜ್ಯ ಮಟ್ಟದ ರಂಗ ಬಣ್ಣ ಶಿಬಿರ ‘ ಪ್ರಗತಿ ಸಂಭ್ರಮ -2026 ಏ 3ರಿಂದ ಏ 9ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಭೆಯು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಏ 1ರಂದು ನಡೆಯಿತು.



ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಆಸರೆ ಸಂಘ ರುಡ್ ಸೆಟ್ ಉಜಿರೆಯ ಸ್ಥಾಪಕ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಮಂದಿರ್ ಬೆಳ್ಳಾರೆಯ ಪ್ರಮೋದ್ ಕುಮಾರ್ ರೈ, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಶಿಬಿರದ ನಿರ್ದೇಶಕ ಗಿರಿಶಂಕರ ಸುಲಾಯ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ಅವರು ಶಿಬಿರದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಗಣೇಶ್ ಉದನಡ್ಕ, ಹರಿಪ್ರಸಾದ್ ರೈ ಕಾಣಿಯೂರು, ಜನಾರ್ದನ ಆಚಾರ್ಯ ಕಾಣಿಯೂರು, ಮಹೇಶ್ ಕೆ ಸವಣೂರು, ಧನಂಜಯ ಕೇನಾಜೆ, ಚೇತನ್ ಕುಮಾರ್ ಕೊಡಿಬೈಲು, ಚಂದ್ರಶೇಖರ ಮುಂಡಾಳ, ಕೇಶವ ಕಲ್ಪಡ, ಜಯಂತ ಅಬೀರ, ಸುಧಾಕರ್ ಕಾಣಿಯೂರು, ರಾಜೇಶ್ ಮೀಜೆ, ರೋಹಿಣಿ ಸುವರ್ಣ ಅಬೀರ, ಶೇಷಪ್ಪ ಅಬೀರ, ಉಮಪ್ರಸಾದ್ ರೈ ನಡುಬೈಲು, ಪ್ರಗತಿ ವಿದ್ಯಾಸಂಸ್ಥೆಯ ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ, ಶಿಕ್ಷಕರ ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಕಾಣಿಯೂರು ಸ್ವಾಗತಿಸಿ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ.ಜೆ ರೈ ವಂದಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗಿ:
ಸಂಪನ್ಮೂಲ ವ್ಯಕ್ತಿಗಳಾದ ಜೂನಿಯರ್ ಶಂಕರ್ ಗಿಲಿ ಗಿಲಿ ಮ್ಯಾಜಿಕ್, ವಂದನಾ ರೈ ಕಾರ್ಕಳ, ವಿದ್ದು ಉಚ್ಚಿಲ ನೀನಾಸಂ, ಕ್ರಿಸ್ಟೋಫರ್ ನೀನಾಸಂ ಸೇರಿದಂತೆ ಶಿಬಿರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮ್ಯಾಜಿಕ್- ಮಾಯಾಲೋಕ, ಗಾಂಧಾರಿ ವಿದ್ಯೆ, ಮಾತನಾಡುವ ಗೊಂಬೆ ,ಮಿಮಿಕ್ರಿ, ಸಂಮೋಹಿನಿ ಶಾಸ್ತ್ರ , ಬಾನೆತ್ತರದ ಗಾಳಿಪಟ, ಅಭಿನಯ ಗೀತೆ, ವರ್ಲಿ ಚಿತ್ರಗಳು, ನೆನಪಿನ ಆಟಗಳು, ಸುಲಭ ಗಣಿತ ಅಲ್ಲದೆ ಇನ್ನು ಹಲವಾರು ತರಬೇತಿಗಳು ನಡೆಯಲಿದೆ. ಶಿಬಿರವು ಬೆಳಿಗ್ಗೆ 9.30 ರಿಂದ ಸಂಜೆ 4 ರ ತನಕ ನಡೆಯಲಿದ್ದು, 4 ವರ್ಷದಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಭಾಗವಹಿಸುವ ಮುಕ್ತ ಅವಕಾಶವಿರುತ್ತದೆ ಎಂದು ಶಿಬಿರದ ಸಂಯೋಜಕರು ತಿಳಿಸಿದ್ದಾರೆ.










