ಪುತ್ತೂರು: ಗ್ಯಾಸ್ ಕೊರತೆ– ಕಿಲೋ ಮೀಟರ್ ಗಟ್ಟಲೆ ಆಟೋ ಕ್ಯೂ- ಗ್ಯಾಸ್ ತುಂಬಿಸಲು ಆಟೋ ಚಾಲಕರ ಪರದಾಟ

0

ಪುತ್ತೂರು: ನಗರದಲ್ಲಿ ತಲೆದೋರಿರುವ ಗ್ಯಾಸ್ ಕೊರತೆ ಇದೀಗ ಆಟೋ ರಿಕ್ಷಾ ಚಾಲಕರಿಗೂ ತೀವ್ರ ಸಂಕಷ್ಟ ಉಂಟುಮಾಡಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಸಂಪ್ಯ ಪ್ರದೇಶದ ಗ್ಯಾಸ್ ಪಂಪ್, ಮುಕ್ರಂಪಾಡಿ ಪಂಪ್‌ ಬಳಿ ಆಟೋಗಳು ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಂತು ಕಾಣಿಸಿಕೊಂಡವು.

ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಉದ್ಯೋಗಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಬೆಳಿಗ್ಗೆಯಿಂದಲೇ ಪಂಪ್ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿ, ಸಂಚಾರಕ್ಕೂ ಅಡಚಣೆ ಉಂಟಾದ ದೃಶ್ಯ ಕಂಡುಬಂದಿತು.
ಗ್ಯಾಸ್ ಕೊರತೆಯಿಂದಾಗಿ ಪ್ರಯಾಣಿಕರಿಗೆ ಸೇವೆ ನೀಡಲು ವಿಳಂಬವಾಗುತ್ತಿರುವುದಾಗಿ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here