ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪ್ರಾಯೋಜಿತ ರೋಟರ್ಯಾಕ್ಟ್ ಕ್ಲಬ್ ಕೆಯ್ಯೂರು ಘಟಕದ ಉದ್ಘಾಟನೆ

0

ಪುತ್ತೂರು : ರೋಟರಿ ಕ್ಲಬ್ ನಿರಂತರ ಸಮಾಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಹಾಗೂ ಸಮಾಜದಲ್ಲಿ ನಾಯಕತ್ವವನ್ನು ಕಲಿಸಿಕೊಡುತ್ತದೆ. ರೋಟರಿ ಕ್ಲಬ್ ಉದ್ಯೋಗ ವೃದ್ಧಿ ಮತ್ತು ವಿವಿಧ ಕ್ಷೇತ್ರಗಳ ಅನುಭವವನ್ನು ಕಲಿಸುವುದರೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ರೋ.ಸತೀಶ್ ಬೋಳಾರ್ ಹೇಳಿದರು.

ಅವರು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ‌ನಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪ್ರಾಯೋಜಿತ ರೋಟರ‌್ಯಾಕ್ಟ್ ಕ್ಲಬ್ ಕೆಯ್ಯೂರು ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಇಂಡಕ್ಷನ್ ಅಧಿಕಾರಿಗಳಾದ ಸುಬ್ರಹ್ಮಣಿ, ಜೋನಲ್ ಲೆಫ್ಟಿನೆಂಟ್ ಉಮಾನಾಥ ಪಿ.ಬಿ., ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ , ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಮುಕ್ವೆ ಅವರು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಅಧ್ಯಕ್ಷ ರೋ.ಚಂದ್ರಹಾಸ ರೈ ಬಿ ಅವರು ರೋಟರ‌್ಯಾಕ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿ, ಯುವಕರು ಸಮಾಜದಲ್ಲಿನ ಅಗತ್ಯತೆಯನ್ನು ಅರಿತುಕೊಂಡು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ರೋಟರಿ ಕ್ಲಬ್ ಸಮಾಜ ಸೇವೆಗೆ ಮಾದರಿಯಾಗಿದೆ ಎಂದು ರೋಟರಿ ಸಂಸ್ಥೆಯ ಕಾರ್ಯವ್ಯಾಪ್ತಿ , ಉದ್ದೇಶದ ಬಗ್ಗೆ ತಿಳಿಸಿದರು.

ರೋಟರ‌್ಯಾಕ್ಟ್ ಕ್ಲಬ್ ಕೆಯ್ಯೂರು ಘಟಕದ ಅಧ್ಯಕ್ಷ ದೀಕ್ಷಿತ್ ರೈ ಉದ್ದೋಳೆ ಮಾತನಾಡಿ, ರೋಟರಿ ಸಂಸ್ಥೆಯ ಆಶಯಕ್ಕೆ ಪೂರಕವಾಗಿ ಸಂಸ್ಥೆಯನ್ನು ಮುನ್ನಡೆಸುವುದಾಗಿ ಹೇಳಿದರು.

ಲಾವಣ್ಯ ನಾಯಕ್ ಪ್ರಾರ್ಥಿಸಿದರು.ರೋಟರ‌್ಯಾಕ್ಟ್ ಅಡ್ವೈಸರ್ ರಮೇಶ್ ರೈ ಬೋಳೋಡಿ ಸ್ವಾಗತಿಸಿದರು. ಡಾ.ರಾಜೇಶ್ ಬೆಜ್ಜಂಗಳ ಪ್ರಸ್ತಾವನೆಗೈದರು.ರೋಟರಿ ಪದಾಧಿಕಾರಿಗಳಾದ ವಸಂತ ಶಂಕರ್ , ಸುರೇಶ್ ಜಿ.ಎಸ್.,ಜಗನ್ನಾಥ ಅರಿಯಡ್ಕ,ಶಿವರಾಮ ಎಂ.ಎಸ್.,ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಜಯಪ್ರಕಾಶ್ ಎ.ಎಲ್ ವಂದಿಸಿದರು. ಡಾ.ಭಾರತಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.

ಪದಸ್ವೀಕಾರ
ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷ ದೀಕ್ಷಿತ್ ರೈ ಉದ್ದೋಳೆ ,ಕಾರ್ಯದರ್ಶಿಯಾಗಿ ಪ್ರಜ್ವಲ್ ರೈ ಚೆನ್ನಾವರ ಪಟ್ಟೆ,ಕೋಶಾಧಿಕಾರಿ ಹಾಗೂ ನಿಯೋಜಿತ ಅಧ್ಯಕ್ಷರಾಗಿ ಹಿತೇಶ್ ಗೌಡ,ಉಪಾಧ್ಯಕ್ಷರಾಗಿ ಸಂತೋಷ್ ರೈ ಕೋರಂಗ,ಜತೆ ಕಾರ್ಯದರ್ಶಿಯಾಗಿ ಅರ್ಚನಾ ರೈ,ಕ್ಲಬ್ ಸರ್ವೀಸ್ ನಿರ್ದೇಶಕ ಆಗಿ ಮನೋಜ್ ರೈ ,ಸಮುದಾಯ ಸೇವೆಗೆ ಗುರುರಾಜ್ ಸುವರ್ಣ,ಅಂತರರಾಷ್ಟ್ರೀಯ ಸೇವೆ ಗೆ ದಿವಾಕರ ಪೂಜಾರಿ ಪಲ್ಲತಡ್ಕ,ಪ್ರೊಫೆಶನಲ್ ಡೆವಲಪ್ಮೆಂಟ್ ರಿತ್ವಿಕ್ ಪೂಜಾರಿ, ಪಬ್ಲಿಕ್ ಇಮೇಜ್ ಆಗಿ ಪ್ರವೀಣ್ ಚೆನ್ನಾವರ,ಸಾರ್ಜೆಂಟ್ ಎಟ್ ಆರ್ಮ್ಸ್ ಆಗಿ ಶಶಿಧರ ಆಚಾರ್ಯ ಹಾಗೂ ರೋಟರ‌್ಯಾಕ್ಟ್ ಅಡ್ವೈಸರ್ ರಮೇಶ್ ರೈ ಬೋಳೋಡಿ ಹಾಗೂ ಸದಸ್ಯರು ಪದಸ್ವೀಕಾರ ಮಾಡಿದರು.

LEAVE A REPLY

Please enter your comment!
Please enter your name here