







ಸವಣೂರು: ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ಎ.7ರಿಂದ ಎ.10ರ ತನಕ ಬಣ್ಣಾಯಣ ಮಕ್ಕಳ ಸಂತಸ ಕಲಿಕಾ ಸಂಭ್ರಮ ಶಿಬಿರ ನಡೆಯಲಿದೆ.


ಶಿಬಿರದಲ್ಲಿ ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಸವಣೂರು ಸಿಆರ್‌ಪಿ ಜಯಂತ ವೈ, ಹಿರಿಯ ಸಾಹಿತಿ ಬಿ.ವಿ.ಸೂರ್ಯನಾರಾಯಣ, ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ., ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು, ಹಿರಿಯ ಕೃಷಿಕ ಹರಿಕೃಷ್ಣ ಕಾಮತ್ ಮುಡಿಪಿನಡ್ಕ, ರಂಗಕರ್ಮಿ ಉದಯ ಸಾರಂಗ್, ವಿದುಷಿ ಡಾ.ಪವಿತ್ರಾ ರೂಪೇಶ್, ಹಿರಿಯ ಕಲಾವಿದ ಪದ್ಮ ಮಾದಕಟ್ಟೆ, ಚಿತ್ರಕಲಾ ಶಿಕ್ಷಕ ರಂಜಿತ್ ಕೆ.ಎಂ ಕುಂಬ್ರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.



ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿಜಯ ಗೌಡ ಕುಚ್ಚೆಜಾಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ, ಮುಖ್ಯ ಶಿಕ್ಷಕಿ ರಶ್ಮಿತಾ ಜೈನ್ ನರಿಮೊಗರು, ವಿದ್ಯಾರ್ಥಿ ನಾಯಕ ತನ್ವಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









