ಅಕ್ಷಯ ಕಾಲೇಜಿನ ಏವಿಯೇಷನ್ ವಿಭಾಗದ ಸಾಧನೆ  : 2ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮಾರಿಷಸ್ ಇಂಟರ್ನ್‌ಶಿಪ್ ಅವಕಾಶ

0

ಪುತ್ತೂರು: ಗ್ರಾಮೀಣ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಒದಗಿಸುತ್ತಿರುವ ಅಕ್ಷಯ ಕಾಲೇಜು, ತನ್ನ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಶಿಕ್ಷಣದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ಈಗಾಗಲೇ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಯಶಸ್ವಿಯಾಗಿ ಮಾರಿಷಸ್‌ನಲ್ಲಿ ಇಂಟರ್ನ್‌ಶಿಪ್ ಪ್ರಾರಂಭಿಸಿರುವ ಹಿನ್ನೆಲೆ, ಇದೀಗ 2ನೇ ಬ್ಯಾಚ್ ವಿದ್ಯಾರ್ಥಿಗಳಿಗೂ ಅಂತಾರಾಷ್ಟ್ರೀಯ ಇಂಟರ್ನ್‌ಶಿಪ್ ತೆರಳಿರುತ್ತಾರೆ.

ಅಕ್ಷಯ ಕಾಲೇಜು ಪುತ್ತೂರು ಭಾಗದಲ್ಲಿ ಏವಿಯೇಷನ್ (ಏವಿಯೇಷನ್) ಕೋರ್ಸ್ ಪರಿಚಯಿಸಿದ ಪ್ರಥಮ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ಕ್ಯಾಬಿನ್ ಸಿಬ್ಬಂದಿ ತರಬೇತಿ, ವಿಮಾನ ನಿಲ್ದಾಣ ನಿರ್ವಹಣೆ, ಗ್ರಾಹಕ ಸೇವೆ ಹಾಗೂ ಆತಿಥ್ಯ ಕೌಶಲ್ಯಗಳನ್ನು ಒದಗಿಸುತ್ತಿದೆ. ಈ ತರಬೇತಿಯ ಮೂಲಕ ವಿದ್ಯಾರ್ಥಿಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಉದ್ಯೋಗಗಳಿಗೆ ಸಿದ್ಧರಾಗುತ್ತಿದ್ದಾರೆ.

ಈಗಾಗಲೇ ಕಾಲೇಜಿನ ಸುಮಾರು 40 ವಿದ್ಯಾರ್ಥಿಗಳು ಪ್ರಮುಖ ಏರ್‌ಲೈನ್ಸ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಅದೇ ರೀತಿಯಲ್ಲಿ, ಈ ವರ್ಷವೂ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಅನುಭವ ಒದಗಿಸುವ ಉದ್ದೇಶದಿಂದ ಮಾರಿಷಸ್‌ನಲ್ಲಿ ಇಂಟರ್ನ್‌ಶಿಪ್ ವ್ಯವಸ್ಥೆ ಮಾಡಲಾಗಿದೆ.

 ವಿದ್ಯಾರ್ಥಿಗಳಾದ ಕೌಶಿಕ್, ಸಾಯಿ ಪ್ರಸಾದ್ ಎಸ್.ಎನ್., ಶ್ರೇಯಸ್, ಲಿಖಿತ ಕೆ.ಪಿ., ವಿಂದ್ಯಶ್ರೀ, ಹರ್ಷಿತ, ಶಮಿತಾ ಯು.ಎಸ್., ಹರ್ಷಿತ ಜೆ., ಆಶಿಕಾ ಜಿ.ಎಸ್., ಮೋಕ್ಷ  ಎಂ.ವಿ., ರಕ್ಷಿತ, ವರ್ಷಿಣಿ ಎಸ್., ನಂದಿತ ವಿ., ಜಗನ್., ವರುಣ್ ದೀಪ್, ನಿತಿನ್ ಹಾಗೂ ಮೋಕ್ಷಿತ್ ತೆರಳಿದ್ದಾರೆ.

ಈ ವಿದ್ಯಾರ್ಥಿಗಳು ಮಾರಿಷಸ್‌ನ ಹೋಟೆಲ್ ಮತ್ತು ಟೂರಿಸಂ ಕ್ಷೇತ್ರದಲ್ಲಿ ಪ್ರಾಯೋಗಿಕ ತರಬೇತಿ ಪಡೆಯಲಿದ್ದು, ತಮ್ಮ ಸಂವಹನ ಕೌಶಲ್ಯಗಳು, ಗ್ರಾಹಕ ನಿರ್ವಹಣೆ ಹಾಗೂ ವೃತ್ತಿಪರ ನೈಪುಣ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಲಿದ್ದಾರೆ.

ಅಕ್ಷಯ ಕಾಲೇಜಿನ ಏವಿಯೇಷನ್ ಕೋರ್ಸ್ ಕೇವಲ ಶಿಕ್ಷಣವಲ್ಲದೆ, ಸಂಪೂರ್ಣವಾಗಿ ವೃತ್ತಿ ಆಧಾರಿತವಾಗಿದ್ದು, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಕಾಲೇಜು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ವೃತ್ತಿಪರ ಕೋರ್ಸ್ ಗಳಿಗೆ ದಾಖಲಾತಿ ಪ್ರಾರಂಭ..
ಅಕ್ಷಯ ಕಾಲೇಜಿನಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾತಿ ಪ್ರಾರಂಭವಾಗಿದೆ. ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಏವಿಯೇಷನ್, ಹಾಸ್ಪಿಟಾಲಿಟಿ, ಸೈನ್ಸ್ ಹಾಗೂ ಸಿಎ (CA) ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.

ಕಾಲೇಜಿನಲ್ಲಿರುವ ಸೌಲಭ್ಯಗಳು..
*ಅನುಭವಸಂಪನ್ನ ಹಾಗೂ ಪರಿಣಿತ ಫ್ಯಾಕಲ್ಟಿ
*ಪ್ರತ್ಯೇಕ Personality Development & Grooming ತರಬೇತಿ
*ಸ್ಪೋಕನ್ ಇಂಗ್ಲಿಷ್ ಹಾಗೂ ಕಮ್ಯುನಿಕೇಶನ್ ಸ್ಕಿಲ್ಸ್ ತರಗತಿಗಳು
*ಇಂಡಸ್ಟ್ರಿ ಓರಿಯೆಂಟೆಡ್ ಪ್ರಾಕ್ಟಿಕಲ್ ಟ್ರೈನಿಂಗ್
*100% ಪ್ಲೇಸ್ಮೆಂಟ್ ಅಸಿಸ್ಟೆನ್ಸ್
*ಇಂಟರ್ನ್ಶಿಪ್ ಹಾಗೂ ಅಂತಾರಾಷ್ಟ್ರೀಯ ಅವಕಾಶಗಳು
*ಹಾಸ್ಟೆಲ್ ಸೌಲಭ್ಯ ಲಭ್ಯ

ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:  08251-200030 | 91411 60704 | 80883 81678

LEAVE A REPLY

Please enter your comment!
Please enter your name here