ಪಿಯುಸಿ ಪರೀಕ್ಷೆ: ಮೊದಲ ಬ್ಯಾಚಿನ ಮೊದಲ ಪ್ರಯತ್ನದಲ್ಲೇ ದಾಖಲೆ ಫಲಿತಾಂಶ ದಾಖಲಿಸಿದ ಸುದಾನ ಪ.ಪೂ ಕಾಲೇಜು-ವಿಜ್ಞಾನ (PCMB) ವಿಷಯದಲ್ಲಿ ತಾಲೂಕಿನಲ್ಲೇ ಅತ್ಯಧಿಕ ಅಂಕ ಗಳಿಸಿದ ಸ್ವಸ್ತಿ ಶೆಟ್ಟಿ

0

ಪುತ್ತೂರು: ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ನೆಹರುನಗರದ ಸುದಾನ ಪದವಿ ಪೂರ್ವ ಕಾಲೇಜು ಶೇ.ನೂರು ಫಲಿತಾಂಶ ದಾಖಲಿಸಿದೆ. 2024-25ನೇ ಸಾಲಿನಲ್ಲಿ ಆರಂಭಗೊಂಡ ಸುದಾನ ಪದವಿ ಪೂರ್ವ ಕಾಲೇಜು ತನ್ನ ಮೊದಲ ಬ್ಯಾಚ್ ನ ಮೊದಲ ಪ್ರಯತ್ನದಲ್ಲೇ ಅತ್ತ್ಯುತ್ತಮ ಫಲಿತಾಂಶ ದಾಖಲಿಸಿ ಹೊಸ ಭಾಷ್ಯ ಬರೆದ ಸಂಸ್ಥೆಯಾಗಿದೆ. ಮೊದಲ ಬ್ಯಾಚ್ ನ ವಿಜ್ಞಾನ ವಿಭಾಗದ ಸ್ವಸ್ಥಿ ಶೆಟ್ಟಿರವರು ಪಿಸಿಎಂಬಿ ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ಮೂಲಕ ಒಟ್ಟು 590 ಅಂಕಗಳೊಂದಿಗೆ ರಾಜ್ಯಕ್ಕೆ ಹತ್ತನೇ ರ್ಯಾಂಕ್ ಗಳಿಸಿರುತ್ತಾರೆ ಜೊತೆಗೆ ಪಿಸಿಎಂಬಿ ವಿಷಯಗಳಲ್ಲಿ ತಾಲೂಕಿನಲ್ಲಿಯೇ ಅತ್ಯಧಿಕ ಅಂಕ ಗಳಿಸುವಲ್ಲಿ ಸ್ವಸ್ಥಿ ಶೆಟ್ಟಿ ಸಫಲರಾಗಿದ್ದಾರೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಸ್ವಸ್ಥಿ ಶೆಟ್ಟಿ(590 ಅಂಕ), ಜಿಯಾ ಸ್ವೀಡಲ್ ಲಸ್ರಾದೊ(575 ಅಂಕ), ಶೇಖ್ ಮೊಹಮ್ಮದ್ ಅಯಾನ್(574), ಶಜ್ಮಾ ಸುಮಯ್ಯ(574), ಖದೀಜ ರಿಯಾ(572), ಅಕ್ಷಯ ರಾಮ(568), ಕೆ.ಜೆ ತ್ರಿಶಲ್ ಕುಮಾರ್(567), ತಸ್ಮಿ ಫಾತಿಮಾ(566), ಫಾತಿಮತ್ ರಿಫಾನಾ(561), ಶಾನ್ ಲೆನ್ವಿನ್ ಮಸ್ಕರೇನ್ಹಸ್(560), ಎ.ಫಾತಿಮಾ ರಾಫಿಯ(558), ಸಂಮ್ಯುಕ್ತ ರೈ(557), ಪ್ರಜೇಶ್(556), ಮುಹಮ್ಮದ್ ನಿಹಾನ್(552), ಶಿಝಾ ಅಝೀಜ್ ಬೊಳ್ವಾರು(550), ಶಿಫಾ ಪರ್ವಿನ್(531), ಭುವಿ ಆಳ್ವ(530), ಹನಿ ಸಾಹುಲ್ ಹಮೀದ್(526), ನಬೀಲ್ ಅಹಮದ್(522), ಮುಹಮ್ಮದ್ ಶಹೀಮ್(522), ಸಹನಾ(521), ಧನುಷ್ ಪಿ(516), ಶ್ರೀಶ(515), ಅಲೀಮ ಸನಾ(514), ಸ್ವಾಲಿಹ ಶಬ್ನಂ(514), ಶ್ರಾವಣಿ ಎಸ್.ಬಿ(511), ವಾಣಿಜ್ಯ ವಿಭಾಗದಲ್ಲಿ ಫಾತಿಮತ್ ಸುಹಾನ(581), ಅಲೀಮ ತಾಯೈಬ(579), ಮಹಮ್ಮದ್ ಶಫೀರ್(544), ಸಫಾ(543), ಮುಹಮ್ಮದ್ ಹುಸೈನ್(543), ಆಯಿಶತ್ ತಾಸ್ಫಿಯ(536), ಅಚಿಂತ್ಯ ಕೆ(535), ಸುಹಾ ಫಾತಿಮಾ(514), ಶಮ್ರನ್ ಎಂ(513) ಅಂಕಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here