







ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿಯ ವಿದ್ಯಾರ್ಥಿನಿ ಕು. ಲಿಖಿತಾ.ಕೆ 2026-27ನೇ ಸಾಲಿನ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದ್ದಾಳೆ.



ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುಮಾರು 5274 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿರುವುದು ಶಾಲೆಗೆ ಹೆಮ್ಮೆ ತಂದಿದೆ. ಇವರಿಗೆ ಮುಖ್ಯ ಗುರು ಜನಾರ್ಧನ ಅಲ್ಚಾರು ಅವರ ಮಾರ್ಗದರ್ಶನದಲ್ಲಿ ಶಿಕ್ಷಕಿ ದಿವ್ಯಾ ಸಾಲಿಗ್ರಾಮ, ರೂಪ ಮಾಯಿಲಕಾನ,ಸ್ವರ್ಣಲತಾ ಕೋಡಿ,ಜಯಲತಾ ಕೊಂದಲ್ಕಾನ ತರಬೇತಿ ನೀಡಿರುತ್ತಾರೆ. ಇವರು ನೀರಮೂಲೆ ಯಶೋಧಾ ಮತ್ತು ಶಿವರಾಮ ದಂಪತಿಗಳ ಸುಪುತ್ರಿ. ಈ ಶಾಲೆಯು ವರ್ಷಂಪ್ರತಿ ನಡೆಯುವ ಪರೀಕ್ಷೆಯಲ್ಲಿ ಉನ್ನತ ಸ್ಥಾನವನ್ನು ಗಳಿಸುತ್ತಾ ಬಂದಿದೆ. ವಿದ್ಯಾರ್ಥಿನಿಗೆ ಶಾಲಾ ಅಧ್ಯಾಪಕ ವೃಂದ ಹಾಗೂ ಎಸ್ಡಿಎಂಸಿ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿರುತ್ತಾರೆ.












