







ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭ ಅಗತ್ಯವಾಗಿ ಬೇಕಾಗುವ ಬ್ಯಾರಿಕೇಡ್ ಅನ್ನು ಯಮುನಾ ಬೋರ್ವೆಲ್ಸ್ನ ದಿವ್ಯಾ ಶೆಟ್ಟಿಯವರು ಕೊಡುಗೆಯಾಗಿ ನೀಡಿದರು.



ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್ ಮತ್ತು ಮಹಾಬಲ ರೈ ವಳತ್ತಡ್ಕ ಅವರು ಬ್ಯಾರಿಕೇಡ್ ಸ್ವೀಕರಿಸಿದರು. ದಿವ್ಯಾ ಶೆಟ್ಟಿಯವರಿಗೆ ದೇವಳದ ನಡೆಯಲ್ಲಿ ಪ್ರಾರ್ಥನೆ ಮಾಡಿ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.












