ಪುತ್ತೂರು ಜಾತ್ರೋತ್ಸವ: ಯುವವಾಹಿನಿ ಪುತ್ತೂರು ಘಟಕದಿಂದ ರಸ್ತೆ ಸ್ವಚ್ಛತೆ

0

ಪುತ್ತೂರು:ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ರಸ್ತೆಯಾದ ಮಜಲುಮಾರು ದೇವಸ್ಥಾನದಿಂದ, ಮುಖ್ಯ ದ್ವಾರದವರೆಗೆ ಎ.12 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ಯೋಧರಾದ ವಿಶ್ವನಾಥ್ ಪೂಜಾರಿ ಹಾಗೂ ಉಮಾಮಹೇಶ್ವರಿ ದೇವಸ್ಥಾನದ ಸಮಿತಿ ಸದಸ್ಯರಾದ ಪದ್ಮನಾಭ ಪೂಜಾರಿ ಇವರು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ನಿವೃತ್ತ ಯೋಧ ವಿಶ್ವನಾಥ ಪೂಜಾರಿರವರು ಮಾತನಾಡಿ, ಮುಂದಕ್ಕೂ ಇಂತಹ ಉತ್ತಮ ಸೇವೆಯನ್ನು ಮುಂದುವರಿಸಿ ಎಂದು ಶುಭ ಹಾರೈಸಿದರು. 

ವೇದಿಕೆಯಲ್ಲಿ ಅಧ್ಯಕ್ಷರಾದ ಸಮಿತ್ ಪಿರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು., ಕಾರ್ಯದರ್ಶಿ ದೀಕ್ಷಿತ್ ಇರ್ದೆ ಉಪಸ್ಥಿತರಿದ್ದರು. ಸ್ವಚ್ಛತಾ  ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here