ಪುತ್ತೂರು: ಪರಿಶಿಷ್ಟ ಪಂಗಡ ಕಾಲನಿ ಅಭಿವೃದ್ದಿಗೆ 1 ಕೋಟಿ.ರೂ ಅನುದಾನ ಮಂಜೂರು

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಕಾಲನಿ ಅಭಿವೃದ್ದಿಗೆ ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಕಾಲನಿ ಅಭಿವೃದ್ದಿಗೆ ಅನುದಾನಕ್ಕಾಗಿ ಅನೇಕ ಮನವಿಗಳು ಬಂದಿದ್ದು ಈ ಪೈಕಿ ಕೆಲವೊಂದಕ್ಕೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ತೀರಾ ಅಭಿವೃದ್ದಿ ಕಾಣದೇ ಇದ್ದ ಕಾಲನಿಗಳಿಗೆ ಈ ಅನುದಾನವನ್ನು ನೀಡಲಾಗುತ್ತದೆ.


ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪಿಯ ಒಳಮೊಗ್ರು ಗ್ರಾಮದ ಮುಡಾಲದಿಂದ ಅರಿಯಡ್ಕ ಗ್ರಾಮದ ಮಾಯಿಲಕೊಚ್ಚಿ ಬೈರಮೂಲೆ ಪ ಪಂಗಡದ ಕಾಲನಿ ಸಂಪರ್ಕ ರಸ್ತೆ ಅಭಿವೃದ್ದಿಗೆ 20 ಲಕ್ಷ ರೂ, ಕೊಳ್ತಿಗೆ ಗ್ರಾಮದ ಸರಸ್ವತಿಮೂಲೆ- ಸುತ್ತುಕೋಟೆ ಪಂಜಿಕೂಡೇಲು, ಮಣಿಕ್ಕಾರ, ಪ ಪಮಗಡದ ಕಾಲನಿ ಸಂಪರ್ಕ ರಸ್ತೆ ಅಭಿವೃದ್ದಿಗೆ 15 ಲಕ್ಷ ರೂ, ಪಾಣಾಜೆ ಗ್ರಾಮದ ಕೊಂದಲ್ಕಾನ – ನೀರಮೂಲೆ- ವಡ್ಯ ಪರಿಶಿಷ್ಟ ಪಂಗಡದ ಕಾಲನಿ ಸಂಪರ್ಕ ರಸ್ತೆ ಅಭಿವೃದ್ದಿಗೆ 15 ಲಕ್ಷ ರೂ, ಬಲ್ನಾಡು ಗ್ರಾಮದ ನೀರುಕುಕ್ಕು ಪರಿಶಿಷ್ಟ ಪಂಗಡದ ಕಾಲನಿ ಸಂಪರ್ಕ ರಸ್ತೆ ಅಭಿವೃದ್ದಿಗೆ 10 ಲಕ್ಷ ರೂ, ಅರಿಯಡ್ಕ ಗ್ರಾಮದ ಕೌಡಿಚ್ಚಾರ್-ಅಕಾಯಿ ಗುಂಡ್ಯಡ್ಕ-ಮಾಯಿಲಕೊಚ್ಚಿ- ದರ್ಬೆತ್ತಡ್ಕ ಪ ಪಂಗಡ ಕಾಲನಿ ರಸ್ತೆ ಅಭಿವೃದ್ದಿಗೆ 15 ಲಕ್ಷ ರೂ, ಅಳಿಕೆ ಗ್ರಾಮದ ಆದಾಳದಿಂದ ಬಿಟ್ಟಿಮೂಲೆ ಪ ಪಂಗಡದ ಕಾಲನಿ ಸಂಪರ್ಕ ರಸ್ತೆ ಅಭಿವೃದ್ದಿಗೆ 15 ಲಕ್ಷ ರೂ, ಪುಣಚ ಗ್ರಾಮದ ಮಾಲೆತ್ತಡ್ಕ ಬಳಿಯ ಪರಿಶಿಷ್ಟ ಕಾಲನಿ ರಸ್ತೆ ಅಭಿವೃದ್ದಿಗೆ 10 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ವಿವಿಧ ಗ್ರಾಮಗಳ ಪ ಪಮಗಡದ ಕಾಲನಿಗೆ ತೆರಳುವ ರಸ್ತೆ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ, ಇದರಿಂದ ಕಾಲನಿಗೆ ತೆರಳಲು ಅಸಾಧ್ಯವಾಗಿತ್ತು ಇದನ್ನು ಮನಗಂಡು ಸರಕಾರಕ್ಕೆ ಮನವಿ ಸಲ್ಲಿಸಿದ್ದು ಒಂದು ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಉಳಿದ ಕೆಲವು ಕಾಲನಿಗಳಿಗೆ ಮುಂದಿನ ದಿನಗಳಲ್ಲಿ ಅನುದಾನವನ್ನು ಒದಗಿಸಲಾಗುವುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಸರಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತಲೇ ಇದ್ದು , ಅಭಿವೃದ್ದಿಯೇ ನಮ್ಮ ಧ್ಯೇಯವಾಗಿದೆ.
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here