






ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಕುಟುಂಬದ ತರವಾಡುನಲ್ಲಿ ನೂತನವಾಗಿ ನಿರ್ಮಿಸಿದ ತರವಾಡು ಮನೆಯ ಗೃಹಪ್ರವೇಶ, ಪರಿವಾರ ದೈವ ಸಾನ್ನಿಧ್ಯಗಳ ಪ್ರತಿಷ್ಠೆ, ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಟಾ ಕಲಶ, ಹಾಗೂ ಏಳ್ಳಾಡು ದೈವ (ಪಿಲಿಚಾಮುಂಡಿ), ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಏ. 11 ರಿಂದ 14 ರವರೆಗೆ ನೆರವೇರಿತು.





ಏ.11ರಂದು ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ದಿಕ್ಬಲಿ, ಪ್ರಸಾದ ವಿತರಣೆ ಜರಗಿತು.






ಏ.12ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ದ್ವಾರಪಾಲಕ ಪೂಜೆ, ಪಂಚವಿಂಶತಿ ಕಲಶ ಪೂಜೆ , 9:13 ರಿಂದ ಒದಗುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ, ಶ್ರೀ ಕುಪ್ಪೆ ಪಂಜುರ್ಲಿ ಹಾಗೂ ಕುಟುಂಬದ ಗುಳಿಗ ಸಾನ್ನಿಧ್ಯ ಪ್ರತಿಷ್ಟೆ, ಜಾಗದ ಗುಳಿಗ ಸಾನ್ನಿಧ್ಯದ ಪುನರ್ ಪ್ರತಿಷ್ಠೆ, ಧರ್ಮದೈವ ಹಾಗೂ ಪರಿವಾರ ದೈವಗಳ ಸಾನ್ನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ನಾಗ ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ, ಮಂಗಳಾರತಿ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ಜರಗಿತು.
ರಾತ್ರಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಪೂಜೆ ನಡೆದು, ಶ್ರೀ ಕ್ಷೇತ್ರದಿಂದ ಶ್ರೀ ಏಳ್ಳಾಡು ದೈವದ (ಪಿಲಿಚಾಮುಂಡಿ) ಭಂಡಾರ ಆಗಮಿಸಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಪಿಲಿಚಾಮುಂಡಿ ದೈವದ ನೇಮ, ಶ್ರೀ ಕುಪ್ಪೆ ಪಂಜುರ್ಲಿ, ಶ್ರೀ ಕಲ್ಲುರ್ಟಿ, ಶ್ರೀ ಕೊರತಿ ದೈವಗಳ ನೇಮೋತ್ಸವ ಜರಗಿತು.



ಏ.13ರಂದು ಸಂಜೆ ಧರ್ಮದೈವ ಹಗೂ ಪರಿವಾರ ದೈವಗಳ ಭಂಡಾರ ಇಳಿದು ,ರಾತ್ರಿ ಅನ್ನಸಂತರ್ಪಣೆ ಶ್ರೀ ಜ್ಯಾವತೆ ದೈವದ, ಶ್ರೀ ವರ್ಣರ ಪಂಜುರ್ಲಿ ದೈವದ ನೇಮ ನಡೆಯಿತು. ಏ.14ರಂದು ಬೆಳಿಗ್ಗೆ ಧರ್ಮದೈವ ಶ್ರೀ ರುದ್ರಚಾಮುಂಡಿ ನೇಮ ಜರುಗಿ ಮಧ್ಯಾಹ್ನ ಪ್ರಸಾದ ಭೋಜನ ಜರಗಿತು. ಅಪರಾಹ್ನ ಕುಟುಂಬ ಗುಳಿಗ ಹಾಗೂ ಜಾಗದ ಗುಳಿಗ ದೈವಗಳ ನೇಮ, ಅಂಗಾರಕುಡ ನೇಮ ನಡೆಯಿತು.
4000 ಮಂದಿಗೆ ಅನ್ನಪ್ರಸಾದ ವಿತರಣೆ
ಒಟ್ಟು 4 ದಿನಗಳ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಸುಮಾರು 4000 ಕ್ಕೂ ಮಿಕ್ಕಿ ಜನರು ಪ್ರಸಾದ ಭೋಜನ ಸ್ವೀಕರಿಸಿದರು.

ಕುಟುಂಬದ ಹಿರಿಯರಾದ ಮೋನಪ್ಪ ಗೌಡ ಮಿತ್ತಡ್ಕ, ಯಜಮಾನ ಸೀತಾರಾಮ ಗೌಡ ಮಿತ್ತಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ತಲೆಪ್ಪಾಡಿ ಮಿತ್ತಡ್ಕ ಹಾಗೂ ಪದಾಧಿಕಾರಿಗಳು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಸತ್ಕರಿಸಿದರು. ಮಿತ್ತಡ್ಕ ಕುಟುಂಬಿಕರ ಉಪ ಸಮಿತಿಗಳ ಕಾರ್ಯಕರ್ತರು, ಮಹಿಳಾ ಸದಸ್ಯರು ವಿವಿಧ ರೀತಿಯ ಜವಾಬ್ದಾರಿ ನಿರ್ವಹಿಸಿದರು.











ಅಶೋಕ್ ರೈ, ಮಠಂದೂರು, ಅರುಣ್ ಪುತ್ತಿಲ ಭೇಟಿ
ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತಿತರ ಗಣ್ಯರು ಭೇಟಿ ನೀಡಿ ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.










