ನಾಳೆ(ಎ.19): ಇತಿಹಾಸ ಪ್ರಸಿದ್ದ ಮಾಡನ್ನೂರು ಮಖಾಂ ಉರೂಸ್ ಸಮಾರೋಪ-ಜಿಫ್ರಿ ತಂಙಳ್ ಸಹಿತ ಹಲವು ಗಣ್ಯರ ಆಗಮನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಮಾಡನ್ನೂರು ಮಖಾಂ ಉರೂಸ್ ಸಮಾರೋಪ ಸಮಾರಂಭ ಎ.19ರಂದು ನಡೆಯಲಿದೆ. ರಾತ್ರಿ ಗಂಟೆ 7-೦೦ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಅಸ್ಸಯ್ಯದ್ ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ದುವಾಶೀರ್ವಚನ ನೀಡಲಿದ್ದು ಕ್ಯಾಲಿಕಟ್ ಗ್ರ್ಯಾಂಡ್ ಖಾಝಿ ಅಸ್ಸಯ್ಯದ್ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ ಉದ್ಘಾಟಿಸಲಿದ್ದಾರೆ. ಮಾಡನ್ನೂರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಯೂಸುಫ್ ಹಾಜಿ ಅರೆಯಾಲಡಿ ಅವರು ಅಧ್ಯಕ್ಷತೆ ವಹಿಸಲಿದ್ದು ಅನ್ವರ್ ಮುಹಿಯುದ್ದೀನ್ ಹುದವಿ, ಆಲುವ ಕೇರಳರವರು ‘ರಿಝ್ಕಿಂಡೆ ವಾದಿಲುಗಳ್ ವಿಷಾಲಮಾವಾನ್’ ಎನ್ನುವ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಮಾಡನ್ನೂರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ ಅಬ್ದುಲ್ಲ, ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ, ಉಪಕಾರ್ಯದರ್ಶಿ ಯೂಸುಫ್ ಸಿ.ಕೆ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ, ನೂರುಲ್ ಹುದಾ ಯುಎಇ ನ್ಯಾಶನಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಶರೀಫ್, ಕೋಶಾಧಿಕಾರಿ ಹಾಜಿ ಅಶ್ರಫ್ ಯಾಕೂತ್, ಉದ್ಯಮಿಗಳಾದ ಇಬ್ರಾಹಿಂ ಹಾಜಿ ಲುಲು, ಯೂಸುಫ್ ಹಾಜಿ ಕಾರಕ್ಕಾಡ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here