






ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಪೊಲೀಸ್ ಠಾಣಾ ಬಳಿಯಲ್ಲಿ ಮೂರು ವಾಹನಗಳ ಮಧ್ಯೆ ಅಪಘಾತ ನಡೆದ ಘಟನೆ ಎ.18ರಂದು ಅಪರಾಹ್ನ ನಡೆದಿದೆ.



ಸುಳ್ಯ ಕಡೆಯಿಂದ ಬಂದ ಮಾರುತಿ ಫ್ರಾಂಕ್ಸ್ ಕಾರು (ಕೆ12ಎಂಬಿ8229) ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ರಿಕ್ಷಾ(ಕೆಎ21ಸಿ6617)ಕ್ಕೆ ಡಿಕ್ಕಿ ಹೊಡೆದು ಅದರ ಹಿಂದಿನಿಂದ ಬರುತ್ತಿದ್ದ ಟಾಟಾ ನೆಕ್ಸಾನ್ ಕಾರು(ಕೆಎ21ಎಂಎ6911)ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಿಕ್ಷಾದಲ್ಲಿದ್ದವರಿಗೆ ಗಾಯಗಳಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.













