ಪುತ್ತೂರು:ಕಟ್ಟಡ ಕೆಡವಿದ ಆರೋಪ-ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು:ಪುತ್ತೂರು ಮುಖ್ಯರಸ್ತೆಯ ಬಳಿಯ ಹಳೇಯ ಕಟ್ಟಡವನ್ನು ಕೆಡವಿರುವ ಕುರಿತು ಮಂಗಳೂರು ಕದ್ರಿಹಿಲ್ಸ್ ನಿವಾಸಿ ಡಾ|ಅರವಿಂದ ರಾವ್ ಕೇದಿಗೆ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


‘ಸಿಜೆ ಮತ್ತು ಜೆಎಂಎಫ್ಸಿ ಬಂಟ್ವಾಳ ನ್ಯಾಯಾಲಯದ ಅದೇಶದ ಮೇರೆಗೆ,ನನ್ನ ಸುಪರ್ದಿಯಲ್ಲಿದ್ದ ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೇಯ ಕಟ್ಟಡ ಮತ್ತು ಜಮೀನಿಗೆ, ಪುತ್ತೂರಿನಲ್ಲಿರುವ ದೇವಸ್ಥಾನದ ಪದಾಧಿಕಾರಿಗಳಾದ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಇತರರು ಏ.14ರಂದು ರಾತ್ರಿ ಅಕ್ರಮವಾಗಿ ಪ್ರವೇಶಿಸಿ, ಸದ್ರಿ ಜಮೀನಿನಲ್ಲಿದ್ದ ಹಳೇಯ ಕಟ್ಟಡವನ್ನು ಕೆಡವಿರುತ್ತಾರೆ’ ಎಂದು ಅವರು ಏ.17ರಂದು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಈ ದೂರಿನ ಮೇರೆಗೆ ಕಲಂ:329(3), 324(2) ಜೊತೆಗೆ 3(5)ಬಿಎನ್‌ಎಸ್ 2023ರಂತೆ ಪ್ರಕರಣ(ಅ.ಕ್ರ.:44/2026)ದಾಖಲಾಗಿದೆ.

LEAVE A REPLY

Please enter your comment!
Please enter your name here