ಆಲಂಕಾರು ಸುತ್ತಮುತ್ತ ಗುಡುಗು-ಸಿಡಿಲು ಸಹಿತ ಮಳೆ : ಮರಕ್ಕೆ ಬಡಿದ ಸಿಡಿಲು

0

ಆಲಂಕಾರು: ಕಳೆದ ಕೆಲವು ದಿನಗಳಿಂದ ಬಿಸಿಲಿನ ದಗೆಯಿಂದ ಬಳಲುತ್ತಿದ್ದ ಆಲಂಕಾರು ಪರಿಸರದ ಜನರಿಗೆ ಸಂಜೆ ವೇಳೆ ಸುರಿದ ಮಳೆ ತಂಪೆರೆದಿದೆ. ಸಂಜೆ ವೇಳೆ ಗುಡುಗು-ಮಿಂಚು ಸಹಿತ ಆರಂಭವಾದ ಮಳೆ, ಹಂತ ಹಂತವಾಗಿ ಜೋರಾಗಿದ್ದು ಮಳೆಗಾಲದ ವಾತಾವರಣ ಸೃಷ್ಟಿಸಿತು.

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂಡಾಜೆ ಎಂಬಲ್ಲಿ ರಸ್ತೆ ಬದಿಯ ಮರಕ್ಕೆ ಸಿಡಿಲು ಬಡಿದಿದ್ದು, ಮರಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಅಥವಾ ಅಪಘಾತ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here