







ಇದೊಂದು ಹಲವಾರು ವಿಶೇಷತೆಗಳನ್ನು ಹೊಂದಿರುವ ಚಿನ್ನಾಭರಣ ಮಳಿಗೆ: ಕಾವು ಹೇಮನಾಥ ಶೆಟ್ಟಿ
ನಗುಮೊಗದ ಸೇವೆ ನಮ್ಮದಾದಾಗ ಸಂಸ್ಥೆಯ ಯಶಸ್ಸು ಸಾಧ್ಯ: ಅರವಿಂದ ಬೋಳಾರ್
ಇಲ್ಲಿನ ಚಿನ್ನಾಭರಣದ ಕ್ವಾಲಿಟಿ ಬಹಳಷ್ಟು ಚಿನ್ನಾಗಿದೆ: ನಿರೀಕ್ಷಾ ಶೆಟ್ಟಿ


ಪುತ್ತೂರು: ಹಲವಾರು ವಿಶೇಷತೆಗಳನ್ನು ಹೊಂದಿರುವ ಚಿನ್ನಾಭರಣ ಮಳಿಗೆ ಇಂದು ಪುತ್ತೂರಿನಲ್ಲಿ ಅದ್ದೂರಿಯಾಗಿ ಶುಭಾರಂಭಗೊಂಡಿದೆ. ಪುತ್ತೂರು ಚಿನ್ನಾಭರಣಕ್ಕೆ ಹೆಸರುವಾಸಿಯಾಗಿರುವ ಊರು. ಖ್ಯಾತಿ ಉಳಿಸುವ ನಿಟ್ಟಿನಲ್ಲಿ ಮಂಗಳೂರು ಜ್ಯುವೆಲ್ಸ್ ನಮ್ಮ ಕಡೆ ಬಂದಿದೆ. ಇವರ ಗ್ರಾಹಕಸ್ನೇಹಿ ಯೋಜನೆ ಈ ಭಾಗದ ಜನತೆಗೆ ಸಹಕಾರಿಯಾಗಲಿದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಹೇಳಿದರು.



ಏ.೨೪ರಂದು ಪುತ್ತೂರಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕ್ಲಬ್ ಬಿಲ್ಡಿಂಗ್ನ ಪ್ರಥಮ ಮಹಡಿಯಲ್ಲಿ ಆರಂಭಗೊಂಡ, ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಮಂಗಳೂರು ಜ್ಯುವೆಲ್ಸ್ ಸಂಸ್ಥೆಯ ಪುತ್ತೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಹಳೇ ಬಂಗಾರಕ್ಕೆ ಉತ್ತಮ ದರ ನೀಡುವ ಇವರ ಯೋಜನೆ ಬಹಳಷ್ಟು ಉಪಕಾರಿಯಾಗಿದೆ. ಅದೇ ರೀತಿ ಬ್ಯಾಂಕ್, ಸಹಕಾರಿ ಸಂಘಗಳಲ್ಲಿ ಅಡವಿರಿಸಿದ ಚಿನ್ನಾಭರಣವನ್ನು ಇವರು ಬಿಡಿಸಿ ಉತ್ತಮ ಬೆಲೆಯೊಂದಿಗೆ ಖರೀದಿ ಮಾಡುವುದೂ ಉತ್ತಮ ಯೋಜನೆಯಾಗಿದೆ. ಈ ಸಂಸ್ಥೆ ಇತರ ಅಂಗಡಿಗಳಿಗಿಂತ ವಿಶೇಷತೆ ಹೊಂದಿದೆ. ಅದನ್ನು ಗ್ರಾಹಕರು ತಿಳಿದುಕೊಳ್ಳುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಪುತ್ತೂರಿನಲ್ಲಿ ಯಶಸ್ವಿಯಾಗುತ್ತದೆ. ಸ್ನೇಹ, ಪ್ರೀತಿ ವ್ಯಾಪಾರದ ಒಳಗುಟ್ಟು. ನಿಮ್ಮ ಉತ್ತಮ ವ್ಯಾಪಾರಕ್ಕೆ ಜನರು ಪರಿಪೂರ್ಣ ಸಹಕಾರ ನೀಡುತ್ತಾರೆ ಎಂದರು.

ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ರವರು ಮಾತನಾಡಿ ಬಹಳಷ್ಟು ಉತ್ತಮ ಸಂಸ್ಥೆ ಇದಾಗಿದೆ. ಪುರುಷರಿಗಿಂತ ಮಹಿಳೆಯರಿಗೆ ಚಿನ್ನಾಭರಣ ಅಚ್ಚು ಮೆಚ್ಚು. ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಪ್ರಮುಖವಾದುದು. ಮಹಿಳೆಯರಿಗೆ ಚಿನ್ನ ಬೆಳ್ಳಿ ಅತೀ ಅಗತ್ಯ. ಎಲ್ಲಾ ಭಾಗದ ಜನ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯನ್ನು ಬೆಳೆಸುವ ಕೆಲಸ ಮಾಡೋಣ. ನಗುಮೊಗದ ಸೇವೆ ನಮ್ಮದಾದಾಗ ಸಂಸ್ಥೆಯ ಯಶಸ್ಸು ಸಾಧ್ಯ. ಉದ್ಘಾಟನೆಯ ಪ್ರಯುಕ್ತ ಸಂಸ್ಥೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿದೆ ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ತುಳು ಹಾಗೂ ಕನ್ನಡ ಚಲನಚಿತ್ರ ನಟಿ ನಿರೀಕ್ಷಾ ಶೆಟ್ಟಿ ರವರು ಮಾತನಾಡಿ ಸಂಸ್ಥೆಯಲ್ಲಿರುವ ಚಿನ್ನಾಭರಣಗಳ ಕ್ವಾಲಿಟಿ ಬಹಳಷ್ಟು ಚಿನ್ನಾಗಿದೆ. ನಾನೂ ಈ ಸಂಸ್ಥೆಯ ಗ್ರಾಹಕಳಾಗಿದ್ದೇನೆ. ಮನಕ್ಕೊಪ್ಪುವ ಡಿಸೈನ್ ಇಲ್ಲಿದೆ. ಚಿನ್ನ ಮಾರಾಟದ ಜೊತೆಗೆ ಚಿನ್ನವನ್ನು ಉತ್ತಮ ಬೆಲೆಗೆ ಕೊಂಡು ಕೊಳ್ಳುವ ವ್ಯವಸ್ಥೆಯನ್ನು ಸಂಸ್ಥೆ ಮಾಡುತ್ತಿದೆ. ಎಲ್ಲರೂ ಜೊತೆಯಾಗಿ ಸಂಸ್ಥೆಯನ್ನು ಬೆಳಗಿಸೋಣ ಎಂದರು.
ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪ್ರಮುಖರಾದ ಸುಬ್ರಹ್ಮಣ್ಯಂ, ಚಿತ್ತಾರದ ಆಡಳಿತ ನಿರ್ದೇಶಕರಾದ ಚಿತ್ತಾರ ಶಿವಕುಮಾರ್, ಸಂಸ್ಥೆಯ ಮಾಲಕರ ಪತ್ನಿ ಪ್ರಮೀಳ ವಿಕ್ರಮ್, ಪುತ್ತೂರು ಶಾಖಾ ವ್ಯವಸ್ಥಾಪಕ ಮೋಹನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಪ್ರಜ್ಞ ಒಡಿಳ್ನಾಳ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ವಿಸ್ತರಣೆ – ಯೋಜನೆ:
ಇ-ಕಾಮರ್ಸ್ ಪ್ಲಾಟ್ ಫಾರ್ಮ್ 2026 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ. ಡಿಜಿಟಲ್ ಚಿನ್ನ/ಬೆಳ್ಳಿ ಈಗಾಗಲೇ ಜಾರಿಗೆ ತಂದಿರುವ ಅನುಪಾತದ ಖರೀದಿ ವ್ಯವಸ್ಥೆ. ಆಂತರಿಕ ಉತ್ಪಾದನಾ ತಂಡವನ್ನು ವಿಸ್ತರಿಸುವುದು. 5 ಹೆಚ್ಚುವರಿ ಪೂರ್ಣ ಪ್ರಮಾಣದ ಆಭರಣ ಮಳಿಗೆಗಳನ್ನು ತೆರೆಯುವುದು. ಹಾಗೂ 25 ಚಿನ್ನ ಖರೀದಿ ಘಟನಕಗಳನ್ನು ಆರಂಭಿಸುವುದು ಮೊದಲಾದ ಯೋಜನೆಗಳನ್ನು ಸಂಸ್ಥೆ ಹಾಕಿಕೊಂಡಿದೆ.

ಚಿನ್ನಾಭರಣ ಉಳಿತಾಯ ಯೋಜನೆ:
ಸಂಸ್ಥೆಯಲ್ಲಿ ಚಿನ್ನಾಭರಣ ಉಳಿತಾಯ ಯೋಜನೆಯೂ ಲಭ್ಯವಿದ್ದು, ಪ್ರತೀ ದಿನ ತಮಗಿಷ್ಟ ಬಂದ ಹಣವನ್ನು ಹನ್ನೊಂದು ತಿಂಗಳು ಪಾವತಿಸ ಬಹುದಾಗಿದೆ. ಆಯಾ ದಿನದ ಚಿನ್ನದ ದರದಲ್ಲಿ ನಿಮ್ಮ ಖಾತೆಗೆ ಚಿನ್ನ ಜಮಾವಣೆಯಾಗಲಿದೆ. ಸಂಸ್ಥೆಯು ಕೊನೆಗೆ ಬೋನಸ್ ಕೂಡ ನೀಡಲಿದೆ. ಆ ಬಳಿಕ ತಮಗಿಷ್ಟ ಬಂದ ಚಿನ್ನದ ಆಭರಣಗಳನ್ನು ಕೊಂಡು ಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ತಯಾರಿಕಾ ವೆಚ್ಚದಲ್ಲಿ ರೀಯಾಯಿತಿಯನ್ನು ಸಂಸ್ಥೆ ನೀಡಲಿದೆ. ಗ್ರಾಹಕರಿಗೆ ಸಹಕಾರಿಯಾಗಲೆಂದು ಆಪ್ ವ್ಯವಸ್ಥೆಯನ್ನು ಮಾಡಲಾಗಿದ್ದು, ತಮ್ಮ ಮೊತ್ತವನ್ನು ತಮ್ಮ ಅಕೌಂಟ್ಗೆ ಆಪ್ ಮೂಲಕವೂ ಜಮಾವಣೆ ಮಾಡಬಹುದಾಗಿದೆ.
ಲೈಟ್ ವೈಟ್ ಜ್ಯುವೆಲ್ಲರಿ ನಮ್ಮ ವಿಶೇಷತೆ
ಪುತ್ತೂರಿನಲ್ಲಿ ನಮ್ಮ ಸಂಸ್ಥೆ ಇಂದು ಉದ್ಘಾಟನೆ ಆಗಿದೆ. ಕಳೆದ ಹಲವಾರು ದಶಕಗಳಿಂದ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡು ಗ್ರಾಹಕರಿಗೆ ಬೇಕಾದ ರೀತಿಯ ಸೇವೆ ನೀಡುತ್ತಾ ಬಂದಿದ್ದೇವೆ. ಚಿನ್ನಾಭರಣ ವನ್ನು ಮಾರಾಟ ಮಾಡುವವರಿಗೂ ನಾವು ಉತ್ತಮ ಬೆಲೆ ನೀಡಲಿದ್ದೇವೆ. ಅದೇ ರೀತಿ ಚಿನ್ನಾಭರಣ ಕೊಳ್ಳುವವರಿಗೂ ಅತೀ ಕಡಿಮೆ ತಯಾರಿಕಾ ಶುಲ್ಕದಲ್ಲಿ ನೀಡಲಿದ್ದೇವೆ. ಲೈಟ್ ವೈಟ್ ಜ್ಯುವೆಲ್ಲರಿ ನಮ್ಮ ವಿಶೇಷತೆಯಾಗಿದೆ. ಬೆಲೆ ಗಗನಕ್ಕೆ ಏರುತ್ತಿರುವ ಈ ಕಾಲಘಟ್ಟದಲ್ಲಿ ಲೈಟ್ ವೈಟ್ ಜ್ಯುವೆಲ್ಲರಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ನಮ್ಮ ಯಶಸ್ಸಿಗೆ ನಮ್ಮ ಬಳಗದ ಸಹಕಾರ ಕಾರಣ.ನೀವು ಬೆಳೆದರೆ ನಾವೂ ಬೆಳೆಯುತ್ತೇವೆ. ನಮ್ಮದೇ ತಯಾರಿಕಾ ಘಟಕ ಇರೋದ್ರಿಂದ ನಮಗೆ ಅತೀ ಕಡಿಮೆ ತಯಾರಿಕಾ ಶುಲ್ಕದಲ್ಲಿ ಚಿನ್ನಾಭರಣ ನೀಡಲು ಸಹಕಾರಿಯಾಗುತ್ತದೆ. ಶುಭಾರಂಭದ ಪ್ರಯುಕ್ತ ಪ್ರತೀ ಐದು ಗ್ರಾಂ ಚಿನ್ನಾಭರಣ ಖರೀದಿಗೆ ಒಂದು ಚಿನ್ನದ ನಾಣ್ಯ ಹಾಗೂ ಬೆಳ್ಳಿ ಖರೀದಿಗೆ ಕೋಲಾಪುರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಬೆಳ್ಳಿಯ ಕಾಯಿನ್ ಉಚಿತವಾಗಿ ಲಭಿಸಲಿದೆ. ಬೆಳೆಯುವ ಅವಕಾಶ ನಮಗೆ ಸಿಕ್ಕಿದೆ. ಪುತ್ತೂರಿನ ಜನರ ಪ್ರೀತಿ ಗೆಲ್ಲುವ ಪ್ರಯತ್ನದಲ್ಲಿ ನಾವಿದ್ದೇವೆ. ಎಲ್ಲರ ಸಹಕಾರ ಅಗತ್ಯ.
-ವಿಕ್ರಮ್ ಆಚಾರ್
ಮಾಲಕರು, ಮಂಗಳೂರು ಜ್ಯುವೆಲ್ಸ್
ಶುಭಾರಂಭದ ಪ್ರಯುಕ್ತ ವಿಶೇಷ ಕೊಡುಗೆ
ಸಂಸ್ಥೆ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ನೀಡಲಿದೆ. ಪ್ರತೀ 5 ಗ್ರಾಂ ಚಿನ್ನದ ಆಭರಣ ಖರೀದಿಗೆ ಚಿನ್ನದ ನಾಣ್ಯ ಉಚಿತವಾಗಿ ಲಭಿಸಲಿದೆ. ಪ್ರತೀ ಬೆಳ್ಳಿಯ ಆಭರಣ ಖರೀಽಗೆ ಬೆಳ್ಳಿಯ ನಾಣ್ಯ ಉಚಿತವಾಗಿ ಪಡೆಯಬಹುದಾಗಿದೆ. ಹಳೇ 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಇತ್ತೀಚಿನ ವಿನ್ಯಾಸಗಳ ಹೊಸ HUID ಚಿನ್ನಾಭರಣಗಳೊಂದಿಗೆ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಉಳಿದಂತೆ ಹಲವಾರು ಕೊಡುಗೆಗಳನ್ನು ಸಂಸ್ಥೆ ನೀಡಲಿದೆ.










