ಪಾಣಾಜೆ ಸುಬೋಧ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಟಾಪರ್ಸ್ ಗಳಿಗೆ  ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸನ್ಮಾನ

0

ಪಾಣಾಜೆ: ವಿದ್ಯಾಭಿಮಾನಿ, ಕೊಡುಗೈದಾನಿ ಅಮ್ಜದ್ ಖಾನ್ ಅಧ್ಯಕ್ಷರಾಗಿರುವ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್, ಪೋಳ್ಯ ಪುತ್ತೂರು ಇದರ ವತಿಯಿಂದ ಇದರ ಅಧ್ಯಕ್ಷರಾಗಿರುವ ವಿದ್ಯಾಭಿಮಾನಿ, ಕೊಡುಗೈದಾನಿ ಅಮ್ಜದ್ ಖಾನ್ ಇವರು ಕಳೆದ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪಾಣಾಜೆ ಸುಬೋಧ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳಾದ ದೀಪಕ್ ಪಿ ಎಸ್ (97.76),ಲಾವಣ್ಯ (93.12)ಪ್ರಜೀಶ್ (92.12),ಫಾತಿಮತ್ ಮುಫಿದ(91.52)ಹಾಗೂ ದೀಪ್ತಿಲಕ್ಷ್ಮಿ (90.04) ಅವರನ್ನು ಶಾಲು ಹೊದೆಸಿ ಸ್ಮರಣಿಕೆ ಮತ್ತು ನಗದು ನೀಡಿ ಗೌರವಿಸಿದರು. 

ಫೌಂಡೇಶನ್ ವತಿಯಿಂದ ಆಗಮಿಸಿದ ಸ್ಪೂರ್ತಿದಾಯಕ ಭಾಷಣಕಾರ ರಫೀಕ್ ಮಾಸ್ಟರ್ ಅವರು ಮಕ್ಕಳನ್ನು ಉದ್ದೇಶಿಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು. ಶಾಲಾ ಸಂಚಾಲಕ  ಗಿಳಿಯಾಲು ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ  ನಿರ್ಮಲ ಕೆ ವಂದಿಸಿದರು. ಉದ್ಯಮಿ ಮೊಹಮ್ಮದ್ ಹಾಜಿ ಕುಕ್ಕುವಳ್ಳಿ, ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಹೆತ್ತವರು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ  ಹರೀಶ್ ನೆಲ್ಲಿತ್ತಿಮಾರು ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ  ಸುಧೀರ್ ಎಸ್ ಪಿ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here