ಪರ್ಪುಂಜ: ಸ್ನೇಹ ಯುವಕ ಮಂಡಲ, ಮಹಿಳಾ ಮಂಡಲದಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಟ

0

ಸ್ನೇಹ ಯುವಕ ಮತ್ತು ಮಹಿಳಾ ಮಂಡಲ ಒಂದು ಒಳ್ಳೆಯ ಸಂಘಟನೆಯಾಗಿದೆ: ಸಂಜೀವ ಪೂಜಾರಿ ಕೂರೇಲು

ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಆಶ್ರಯದಲ್ಲಿ ಗ್ರಾಮೀಣ ಮಟ್ಟದ ಮುಕ್ತ ಸೂರ್ಯನ ಬೆಳಕಿನ ಮೊದಲನೇ ವರ್ಷದ ಒಂದೇ ಗ್ರಾಮದ ಆಟಗಾರರನ್ನೊಳಗೊಂಡ ಕೋಟಿ ಚೆನ್ನಯ ಟ್ರೋಫಿ ವಾಲಿಬಾಲ್ ಪಂದ್ಯಾಟ ಏ.26ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆಯಿತು.

ಪಂದ್ಯಾಟವನ್ನು ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಉದ್ಘಾಟಿಸಿ ಮಾತನಾಡಿ, ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದಿಂದ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿ ವರ್ಷ ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಬಹಳ ವಿಜೃಂಭಣೆಯಿಂದ ಜರಗುತ್ತಿದೆ ಇದರಲ್ಲು ಬಹಳಷ್ಟು ಕ್ರೀಡಾಕೂಟಗಳು ನಡೆಯುತ್ತಿದ್ದು, ಈ ವರ್ಷ ಕೋಟಿ ಚೆನ್ನಯ ಹೆಸರಿನಲ್ಲಿ ವಾಲಿಬಾಲ್ ಪಂದ್ಯಾಟ ಆರಂಭಿಸಿದ್ದು ಖುಷಿ ತಂದಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಇದೊಂದು ಒಳ್ಳೆಯ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಅತಿಥಿಗಳಾಗಿ ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು, ಶಿವಕೃಪಾ ಆಡಿಟೋರಿಯಂನ ಮಾಲನ, ಉದ್ಯಮಿ ಹರಿಹರ ಕೋಡಿಬೈಲು, ಪ್ರಗತಿಪರ ಕೃಷಿಕ ಅನಿಲ್ ರೈ ಬಾರಿಕೆ, ರಮೇಶ್ ರೈ ಮುರುವ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ, ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ ಮತ್ತಿತರರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪನ ಅಧ್ಯಕ್ಷ ಸಹಜ್ ರೈ ಬಳಜ್ಜ, ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಅಧ್ಯಕ್ಷ ರತನ್ ರೈ ಕುಂಬ್ರ, ಸನತ್ ರೈ ಎಳ್ನಾಡುಗುತ್ತು, ಸೃಜನ್ ರೈ, ಎಎಂಆರ್ ಸ್ಫೋರ್ಟ್ಸ್ ವೇರ್ ಪುತ್ತೂರು ಇದರ ಪ್ರದೀಪ್, ಉದ್ಯಮಿ ಶರತ್ ಆಳ್ವ ಕೂರೇಲು, ರಾಜೇಶ್ ರೈ ಪರ್ಪುಂಜ, ಸಂಜೀವ ಪೂಜಾರಿ ದೊಡ್ಡಡ್ಕ, ವನತ ಕೌಡಿಚ್ಚಾರು, ಇರ್ಷಾದ್ ಕೌಡಿಚ್ಚಾರ್, ಬಾಬು ಮಾಸ್ತರ್, ರಾಕೇಶ್ ಗೌಡ ಪರನೀರು, ಗುಣಕರ ಶೆಟ್ಟಿ, ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್, ಸ್ನೇಹ ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಪೂಜಾರಿ ಪಿದಪಟ್ಲ, ಕಾರ್ಯದರ್ಶಿ ಕಿಶನ್ ಗೌಡ ರಾಮಜಾಲು ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ವಿಕ್ಕಿ ಫ್ರೆಂಡ್ಸ್ ಮುಲ್ಕಿ, ರನ್ನರ್ಸ್ ಎಂವೈಎಸ್ ಸೇರ್ಕಳ, ಫಸ್ಟ್ ರನ್ನರ್ ಎಸ್‌ಕೆವೈಸಿ ಪಟ್ಟೆ, 2ನೇ ರನ್ನರ್ ಎಕೆಎಫ್ ಅಡ್ಯಾರ್ ಪಡೆದುಕೊಂಡಿತ್ತು. ವಿಜೇತ ತಂಡಗಳಿಗೆ ರೂ. 8008,6006,2002,2002 ನಗದು ಮತ್ತು ಕೋಟಿ ಚೆನ್ನಯ ಟ್ರೋಫಿ ನೀಡಿ ಗೌರವಿಸಲಾಯಿತು. ಶ್ರೇಯಾ ಆರ್ ರೈ ಪ್ರಾರ್ಥಿಸಿದರು. ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ರಕ್ಷಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here