ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಹರ್ಷ ಕುಮಾರ್ ರೈ ಮಾಡಾವು

0

ಪುತ್ತೂರು: ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಅಂತರಾಷ್ಟ್ರೀಯ ಪ್ರಸಿದ್ದಿ ಪಡೆದ ಅಸಾಧಾರಣ ಸಾಧಕರಿಗೆ ನೀಡುವ 51 ನೇ ವರ್ಷದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುತ್ತೂರಿನ ಯುವ ಮುಂದಾಳು ಡಾ. ಹರ್ಷ ಕುಮಾರ್ ರೈ ಮಾಡಾವು ಆಯ್ಕೆಯಾಗಿದ್ದಾರೆ.ಮೇ 23 ರಂದು ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


ಹರ್ಷ ಕುಮಾರ ರೈಯವರು ವೃತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿನ್ಯಾಸಗಾರರಾಗಿದ್ದು, ಜೊತೆಗೆ ಭಾರತ ಸರ್ಕಾರದ ಇಂಡಿಯನ್ ರೋಡ್ಸ್ ಕಾಂಗ್ರೆಸ್
ಇದರ ತಾಂತ್ರಿಕ ಸಮಿತಿ ಸದಸ್ಯರಾಗಿದ್ದಾರೆ. ಬ್ರೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉದ್ಯಮವನ್ನು ವಿಸ್ತರಿಸಿ, ತಾಂತ್ರಿಕ ಮಟ್ಟದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.


ಜನ್ಮ ಫೌಂಡೇಶನ್‌ ಟ್ರಸ್ಟ್, ಜನ್ಮಕ್ರಿಯೇಷನ್ಸ್ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಇವರು, ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗ್ರತಿಯ ಜಿಲ್ಲಾ ಚೈರ್‌ಮಾನ್ ಆಗಿದ್ದು, ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿರುತ್ತಾರೆ. ಈಗಾಗಲೇ ಭಾರತ್ ಸಮ್ಮಾನ್ ಪ್ರಶಸ್ತಿ, ಇಂಡಿಯಾ ಬುಕ್ ಆಫ್ ರೆಕಾರ್ಡ್, ವಲ್ಡ್ ಕಿಂಗ್ಸ್ ಗೌರವ, ಕರ್ನಾಟಕ ವಿಭೂಷನ ಪ್ರಶಸ್ತಿ, ರೋಟರಿ ಅನ್‌ಸಂಗ್ ಹೀರೋ, ಯುವ ಬಂಟ ರತ್ನ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಇವರು ಪುತ್ತೂರು ತಾಲೂಕು ಕೆಯ್ಯರು ಗ್ರಾಮದ ನಿವೃತ್ತ ವಿಜಯಾ-ಬ್ಯಾಂಕ್ ಅಧಿಕಾರಿ ಕುರಿಯ ಮಾಡಾವು ಏಳ್ಳಾಡುಗುತ್ತು ಮೋಹನ್ ರೈ ಮತ್ತು ಡಿಂಬ್ರಿ ಗುತ್ತು ಜಯಂತಿ ರೈ ಯವರ ಪುತ್ರ.

LEAVE A REPLY

Please enter your comment!
Please enter your name here