







ಆಲಂಕಾರು: ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ ೨೯ನೇ ಸೇವೆಯಾಗಿ ಬ್ರಹ್ಮಕಪಾಲ (ಭಾಗ 1) ಯಕ್ಷಗಾನ ತಾಳಮದ್ದಳೆ ಏ.25ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಡಿ.ಕೆ.ಆಚಾರ್ಯ ಹಳೆನೇರೆಂಕಿ, ಸುಧಾಂಶು ಆಚಾರ್ಯ ಕಲ್ಲಡ್ಕ, ಶಿವರಂಜನ್ ಕಡಬ. ಚೆಂಡೆ ಮದ್ದಲೆಯಲ್ಲಿ ಶಿಕಿನ್ ಶರ್ಮಾ ಶರವೂರು ಬೆಂಗಳೂರು, ದಿವಾಕರ ಆಚಾರ್ಯ ಹಳೆನೇರೆಂಕಿ ಸಹಕರಿಸಿದರು. ಮುಮ್ಮೇಳದಲ್ಲಿ ರಾಮ್ ಪ್ರಸಾದ್ ಆಲಂಕಾರು (ದೇವೇಂದ್ರ) , ರಾಘವೇಂದ್ರ ಭಟ್ ತೋಟಂತಿಲ, ಗುರು ಪ್ರಸಾದ್ ಆಲಂಕಾರು (ಈಶ್ವರ ), ನಾರಾಯಣ ಭಟ್ ಆಲಂಕಾರು (ಪಾರ್ವತಿ), ದಿವಾಕರ ಆಚಾರ್ಯ ಹಳೆನೇರೆಂಕಿ (ಬ್ರಹ್ಮ), ರಾಮ್‌ಪ್ರಕಾಶ್ ಕೊಡಂಗೆ (ಶಾರದೆ), ಕೃಷ್ಣಮೂರ್ತಿ ಕೆಮ್ಮಾರ (ಮನ್ಮಥ), ನಾರಾಯಣ ಭಟ್ ಆಲಂಕಾರು (ಬೃಹಸ್ಪತಿ) ಸಹಕರಿಸಿದರು. ಸೇವಾರ್ಥಿಗಳಾದ ಕಾರುಣ್ಯ ರಾವ್ ಶರವೂರು ಬೆಂಗಳೂರು ಇವರಿಗೆ ಪ್ರಸಾದ ವಿತರಿಸಲಾಯಿತು. ಕೋಶಾಧಿಕಾರಿ ರಾಮ್‌ಪ್ರಸಾದ್ ಆಲಂಕಾರು ಸ್ವಾಗತಿಸಿ, ಕಲಾವಿದ ನಾರಾಯಣ ಭಟ್ ಆಲಂಕಾರು ವಂದಿಸಿದರು. ಕಲಾಭಿಮಾನಿಗಳು, ಭಕ್ತಾದಿಗಳು ಹಾಗೂ ಕಲಾಪೋಷಕರು ಉಪಸ್ಥಿತರಿದ್ದರು













