







ರಾಮಕುಂಜ: ಕಳೆದ ಐದೂವರೇ ವರ್ಷದಿಂದ ಕಡಬ ತಾಲೂಕಿನ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಗುಲಾಬಿ ಎಸ್.ಅವರು ಏ.30ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಇವರು 34 ವರ್ಷ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.


ಪುತ್ತೂರು ತಾಲೂಕಿನ ಕೊಪ್ಪ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಸೇವೆ ಆರಂಭಿಸಿದ ಇವರು ಇಲ್ಲಿ 28-6-1991 ರಿಂದ 20-8-1997ರ ತನಕ, ಬಳಿಕ ಸಬಳೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 21-8-1997 ರಿಂದ 1-9-2003ರ ತನಕ, ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 2-9-2003 ರಿಂದ 1-8-2014ರ ತನಕ, ಬಂಟ್ವಾಳ ತಾಲೂಕಿನ ಖಂಡಿಗ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 1-8-2014ರಿಂದ 14-12-2021ರ ತನಕ ಸೇವೆ ಸಲ್ಲಿಸಿ, ಪ್ರಸ್ತುತ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 15-12-2021ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿಯಾಗಿ 34 ವರ್ಷ ಸೇವೆ ಸಲ್ಲಿಸಿರುವ ಇವರು ಏ.30ರಂದು ನಿವೃತ್ತಿಯಾಗಲಿದ್ದಾರೆ. ಇವರು ಕುಂತೂರು ಶೇಡಿಮನೆ’ ಶಿವಂ ನಿಲಯ’ದ ಹರೀಶ್ ಶೆಟ್ಟಿ ಅವರ ಪತ್ನಿ.













