ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ನೃತ್ಯಗುರು ವಿದುಷಿ ರೋಹಿಣಿ ಉದಯ್ ಆಯ್ಕೆ

0

ಪುತ್ತೂರು : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರು ಕೊಡಮಾಡುವ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ – 2026 ಪ್ರಶಸ್ತಿಗೆ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಇದರ ನೃತ್ಯಗುರು ಮತ್ತು ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ ಬಿ.ಸಿ.ರೋಡ್ ಇದರ ಅಧ್ಯಕ್ಷೆ, ವಿದುಷಿ ರೋಹಿಣಿ ಉದಯ್ ಅವರು ಆಯ್ಕೆಯಾಗಿರುತ್ತಾರೆ.

ಅವರ ಭರತನಾಟ್ಯ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ . ಮೇ.23 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುವುದು ಎಂದು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿದುಷಿ ರೋಹಿಣಿ ಉದಯ್ ಅವರು ಕಳೆದ 22 ವರ್ಷಗಳಿಂದ ಭರತ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಭರತನಾಟ್ಯವನ್ನು ಪ್ರಚುರ ಪಡಿಸುತ್ತಾ ಬಂದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಪುರುಷರಕಟ್ಟೆ, ಬಿ ಸಿ ರೋಡ್, ಬಂಟ್ವಾಳ, ಪಾಣೆಮಂಗಳೂರು, ಕನ್ಯಾನ ಗ್ರಾಮೀಣ ಪ್ರದೇಶ ಮತ್ತು ಕಕ್ಯಪದವುಗಳಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಾ ಬಂದಿದ್ದಾರೆ.

ಅಲ್ಲದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಕೂಡ ನೀಡುತ್ತಿದ್ದಾರೆ. ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ (ರಿ) ಪುತ್ತೂರು ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ 19 ವರ್ಷಗಳಿಂದ ಈ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ನೃತ್ಯ ಕಲಾವಿದರನ್ನು ಕರೆಸಿ ನೃತ್ಯ ವಿದ್ಯಾರ್ಥಿಗಳಿಗೆ ಕಾರ್ಯಗಾರಗಳನ್ನು, ಪ್ರಾತ್ಯಕ್ಷಿಕೆಗಳನ್ನು, ನೃತ್ಯ ಪ್ರದರ್ಶನಗಳನ್ನು ಮಾಡುತ್ತಾ ಬಂದಿರುತ್ತಾರೆ. ಪ್ರತಿ ವರ್ಷ ಸಂಸ್ಥೆಯ ಮೂಲಕ ಒಂದು ದಿನದ “ನೃತ್ಯಧಾರ” ಎಂಬ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಯಕ್ಷಗಾನರಂಗದ ಮೇರು ಹಾಸ್ಯ ಕಲಾವಿದ ಕೀರ್ತಿಶೆಷ ರಸಿಕರತ್ನ ನಯನಕುಮಾರ್ ರವರ ಅವರ ಸೊಸೆಯಾಗಿದ್ದು, ಅವರ ಹೆಸರಿನಲ್ಲಿ ಕಲಾ ಸಾಧಕರಿಗೆ “ಕಲಾನಯನ” ಪ್ರಶಸ್ತಿಯನ್ನು ಕಳೆದ 4 ವರುಷಗಳಿಂದ ನೀಡುತ್ತಾ ಬಂದಿದ್ದಾರೆ . “ನೃತ್ಯರಂಜನಿ” ಎಂಬ ತಿಂಗಳ ನೃತ್ಯಸರಣಿ ಕಾರ್ಯಕ್ರಮ ನೀಡುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ ಟಿ. ವಿ ವಾಹಿನಿ ಡೈಜಿವರ್ಲ್ಡ್ ವಾಹಿನಿಯಲ್ಲಿ ನಡೆಯುತ್ತಿರುವ ಕರ್ನಾಟಕದ ಪ್ರಪ್ರಥಮ ಭರತನಾಟ್ಯ ರಿಯಾಲಿಟಿ ಶೋ ಆದ “ನಟನಂ” ಇದರ ತೀರ್ಪುಗಾರರಾಗಿರುತ್ತಾರೆ.
ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ವೃಕ್ಷ ಅಭಿಯಾನ ಎಂಬ ಶೀರ್ಷಿಕೆಯಡಿ ಪ್ರತೀ ವರ್ಷ ಗಿಡಗಳನ್ನು ನೆಡುತ್ತಾ ಅದನ್ನು ಪೋಷಿಸುತ್ತಾ ಬಂದಿರುತ್ತಾರೆ. ಸಂಸ್ಥೆಯ 11ನೇ ವರ್ಷದ ಕಾರ್ಯಕ್ರಮಕ್ಕೆ ನಾಡೋಜ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕನವರು ಆಗಮಿಸಿ ಗಿಡನೆಟ್ಟು ಆಶೀರ್ವದಿಸಿದ್ದರು.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ. ಎಂಬ ಸಹಕಾರಿ ಸಂಘವನ್ನು ಹುಟ್ಟು ಹಾಕಿ ಇದರ ಅಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಶಾಸಕರ ವಾರ್ ರೂಂಗೆ ಅಕ್ಕಿ ಮತ್ತು ಸಕ್ಕರೆಯನ್ನು ಕೂಡ ನೀಡಿರುತ್ತಾರೆ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ತಂಡದ ಮೂಲಕ ಜಿಲ್ಲೆ, ರಾಜ್ಯ ಹಾಗು ಹೊರ ರಾಜ್ಯಗಳಲ್ಲೂ ಸುಮಾರು 1000 ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮಾನವ ಹಕ್ಕುಗಳ ಆಯೋಗದಿಂದ “ಹೆಚ್.ಆರ್.ಸಿ ಪ್ರಶಸ್ತಿ,” ಸುಮಸೌರಭ ಪತ್ರಿಕೆಯವರು ಕೊಡಲ್ಪಡುವ “ಸುಮಸೌರಭ ರತ್ನ” ಪ್ರಶಸ್ತಿ ಲಿಭಿಸಿದೆ.

LEAVE A REPLY

Please enter your comment!
Please enter your name here