







ಕಡಬ: ಜೇಸಿಐ ಆಲಂಕಾರು ಘಟಕದ ವತಿಯಿಂದ ಎಪ್ರಿಲ್ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಮತ್ರಾಡಿಯ ಎಲಿಯಮ್ಮ ಇವರ ಮನೆಯಲ್ಲಿ ನಡೆಯಿತು.


ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಘಟಕದ ನಿಕಟಪೂರ್ವಾಧ್ಯಕ್ಷ ಗುರುರಾಜ್ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಗೆರಟೆ, ಪ್ಲಾಸ್ಟಿಕ್ ಬಾಟಲ್ ಗಳು ಹಾಗೂ ಮನೆಯ ಇನ್ನಿತರ ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಅದ್ಭುತ ಕಲಾಕೃತಿಗಳನ್ನು ರಚಿಸಿ, ಅಲಂಕಾರಿಕ ಗಿಡಗಳನ್ನು ಬೆಳೆಯುವ ಮೂಲಕ ಮನೆಯ ಸೌಂದರ್ಯ ಹೆಚ್ಚಿಸಲು, ತಮ್ಮ ಪರಿಶ್ರಮ ಹಾಗೂ ಸೃಜನಶೀಲತೆಯಿಂದ ಕಲೆಯ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟಿರುವ ಮತ್ರಾಡಿಯ ಎಲಿಯಮ್ಮ ಇವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.



ಈ ಸಂದರ್ಭದಲ್ಲಿ ಜೇಸಿಐ ಆಲಂಕಾರು ಘಟಕದ ಪೂರ್ವಾಧ್ಯಕ್ಷರಾದ ಗುರುಕಿರಣ್ ಶೆಟ್ಟಿ, ಹರಿಶ್ಚಂದ್ರ ಕೆ, ಸದಸ್ಯರಾದ ಪುರಂದರ ಕೆ, ಸುನಿತಾ ಗುರುರಾಜ್ ರೈ, ಧ್ಯಾನ್ ಹಾಗೂ ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು. ಅಧ್ಯಕ್ಷ ಮಹೇಶ್ ಪಾಟಾಳಿ ಸ್ವಾಗತಿಸಿ, ಭರತ್ ಶೆಟ್ಟಿ ವಂದಿಸಿದರು.










