








ಪುತ್ತೂರು: ಕೊಂಬೆಟ್ಟಿನ ಅಶ್ವತ್ಥ ಕಟ್ಟೆಯಲ್ಲಿರುವ ಪುರಾತನ ಕಾಲದ ಅಶ್ವತ್ಥ ಮರದ ಭಾರೀ ಗಾತ್ರದ ಗೆಲ್ಲೊಂದು ಮುರಿದು ಬಿದ್ದು ಆವರಣಗೋಡೆಗೆ ಹಾನಿಯಾದ ಘಟನೆ ಮೇ.9 ರಂದು ರಾತ್ರಿ ನಡದಿದೆ.


ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಜಾತ್ರೋತ್ಸವ ಸಂದರ್ಭ ಪೇಟೆ ಸವಾರಿ ವೇಳೆ ಕೊಂಬೆಟ್ಟಿನ ಅಶ್ವತ್ಥ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸುತ್ತಾರೆ. ಅದೆ ಕಟ್ಟೆಯಲ್ಲಿರುವ ಅಶ್ವತ್ಥ ಮರ ಭಾರಿ ಪುರಾತನವಾದುದು. ಮರದ ಭಾರೀ ಗಾತ್ರದ ಗೆಲ್ಲೊಂದು ಮುರಿದು ಬಿದ್ದಿದೆ. ಪರಿಣಾಮ ಇಂಟರ್ ಲಾಕ್ ರಸ್ತೆ ಮುಚ್ಚಿದೆ. ಪಕ್ಕದ ಗಣೇಶ್ ಬಾಳಿಗ ಅವರ ಮನೆಯ ಆವರಣಗೋಡೆಗೆ ಹಾನಿಯಾಗಿದೆ.












