ತ್ಯಾಗರಾಜನಗರ ʻಭ್ರಾಮರಿ ನಿವಾಸʼ ಗೃಹಪ್ರವೇಶ – ʻಶ್ರೀದೇವಿ ಮಹಾತ್ಮೆʼ ಯಕ್ಷಗಾನ

0

ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ರಶ್ಮಿ ಕುಮಾರಿ ಮತ್ತು ಸಂಪತ್‌ ಕುಮಾರ್‌ ರವರು ನೂತನವಾಗಿ ನಿರ್ಮಿಸಿದ ಮನೆ ಭ್ರಾಮರಿ ನಿವಾಸದ ಗೃಹಪ್ರವೇಶ ಮೇ.8ರಂದು ನಡೆಯಿತು. ವೇ.ಮೂ. ದಿನೇಶ್‌ ಮರಡಿತ್ತಾಯ ಗುಮ್ಮಟೆಗದ್ದೆ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಹೋಮ ಮತ್ತು ಸತ್ಯನಾರಾಯಣ ದೇವರ ಪೂಜೆ ಜರಗಿತು. ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ʻಶ್ರೀದೇವಿ ಮಹಾತ್ಮೆʼ ಕನ್ನಡ ಯಕ್ಷಗಾನ ಸೇವೆಯಾಟ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಿತು.

ಈ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಸ್ಥಾಪಕ ಅರುಣ್‌ ಕುಮಾರ್‌ ಪುತ್ತಿಲ, ಬಂಧು-ಮಿತ್ರರು ಭಾಗವಹಿಸಿದರು.

ಭ್ರಾಮರಿ ನಿವಾಸದ ಶ್ರೀಮತಿ ರಶ್ಮಿ ಕುಮಾರಿ ಮತ್ತು ಸಂಪತ್‌ ಕುಮಾರ್‌ ತ್ಯಾಗರಾಜನಗರ, ಜಯಶ್ರೀ ಮತ್ತು ಸಂತೋಷ್‌ ತಾರಿಗುಡ್ಡೆ, ಸುಶೀಲ ಮತ್ತು ಜಗನ್ನಾಥ ತ್ಯಾಗರಾಜನಗರ, ಸುಷ್ಮಾ ಮತ್ತು ಮೋಹಿತ್‌ ತ್ಯಾಗರಾಜನಗರ ಮತ್ತು ಮನೆಯವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಸಂಜೆ ನಡೆದ ಕಟೀಲು ಮೇಳದ ಯಕ್ಷಗಾನ ಸೇವೆಯಾಟ ʻಸುದ್ದಿ ಲೈವ್‌ʼ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here