ರಸ್ತೆ, ನೀರು, ಬೆಳಕು ಕೊಟ್ಟ ಶಾಸಕರಿಗೆ ನಿವಾಸಿಗಳ ಹಾರೈಕೆ – ‘ಮುಂದಿನ ವೋಟು ನಿಮಗೇ’

0

ಪುತ್ತೂರು: “ನಮ್ಮ ಲೇಔಟ್‌ಗೆ ತೆರಳುವ ರಸ್ತೆ ಕೆಟ್ಟು ಹೋಗಿತ್ತು, ಕರೆಂಟ್ ಇರಲಿಲ್ಲ, ನೀರಿನ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ಹಲವು ವರ್ಷಗಳಿಂದ ನಾವು ನಿತ್ಯ ನರಕ ಅನುಭವಿಸುತ್ತಿದ್ದೆವು. ಕೊನೆಗೆ ನಮಗೆ ಸಹಾಯ ಮಾಡಿದ್ದು ಶಾಸಕ ಅಶೋಕ್ ರೈ. ಅವರು ಮಾಡಿದ ಉಪಕಾರ ಮರೆಯಲಾರೆವು. ಮುಂದಿನ ಚುನಾವಣೆಯಲ್ಲಿ ನಮ್ಮ ವೋಟು ಅಶೋಕ್ ರೈಗೆ” ಎಂದು ನರಿಮೊಗರು ಗ್ರಾಮದ ಅನಘಾ ಲೇಔಟ್ ನಿವಾಸಿಗಳು ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ್ದಾರೆ.

ಲೇಔಟ್‌ನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಶಾಸಕ ಅಶೋಕ್ ರೈ ಆಗಮಿಸಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಫಲಾನುಭವಿಗಳು ಶಾಸಕರು ಮಾಡಿದ ಉಪಕಾರವನ್ನು ನೆನೆಸಿಕೊಂಡರು. ಇದೇ ಸಂದರ್ಭದಲ್ಲಿ ಸೇರಿದ್ದ ನಿವಾಸಿಗಳು ಗ್ರಾಮ ದೇವರು ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ, “ನಾವು ಮುಂದೆ ನಿಮ್ಮೊಟ್ಟಿಗೇ ಇರುತ್ತೇವೆ” ಎಂದು ಭರವಸೆ ನೀಡಿದರು. ಕೃತಜ್ಞತೆ ವ್ಯಕ್ತಪಡಿಸಿದ ಗ್ರಾಮಸ್ಥರಿಗೆ ಶಾಸಕ ಅಶೋಕ್ ರೈ ಅಭಿನಂದಿಸಿದರು.

LEAVE A REPLY

Please enter your comment!
Please enter your name here