






ಕಾಣಿಯೂರು: ಕಲ್ಪಡ ಕೊಡಿಯಾಲ ಸ್ನೇಹಿತರ ಬಳಗದ ದಶಮ ಸಂಭ್ರಮದ ಪ್ರಯುಕ್ತ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ವತಿಯಿಂದ ಬೃಹತ್ ಆಧಾರ್ ಮೇಳ ಅಪಘಾತ ವಿಮೆ ಹಾಗೂ ಅರೋಗ್ಯ ವಿಮೆ ಶಿಬಿರವು ಮೂವಪ್ಪೆ ಸಭಾಂಗಣದಲ್ಲಿ ಮೇ.10ರಂದು ನಡೆಯಿತು.






ಕಾರ್ಯಕ್ರಮದ ಉದ್ಘಾಟನೆಯನ್ನು ಸ್ನೇಹಿತರ ಬಳಗದ ಗೌರವಧ್ಯಕ್ಷ ಶಿವರಾಮ ಉಪಾಧ್ಯಯ ಕಲ್ಪಡ ಮಾಲೆತ್ತಾರು ನೆರವೇರಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಸ್ನೇಹಿತರ ಬಳಗದ ಅಧ್ಯಕ್ಷ ಸುರೇಶ್ ಗುತ್ತು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾರತೀಯ ಅಂಚೆ ಇಲಾಖೆಯ ಸಿಬ್ಬಂದಿ ಪ್ರಜ್ವಲ್ ಕೆ. ಸಿ ಯವರು ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆ ಬಗ್ಗೆ ಮಾಹಿತಿ ನೀಡಿದರು. ಕೊಡಿಯಾಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರ್ಷನ್ ಕೆ. ಟಿ, ದಶಮಾನ ಸಂಭ್ರಮದ ಸಂಚಾಲಕ ಕೇಶವ ಕೆ. ಪಿ ಕಲ್ಪಡ ತೋಟ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎಸ್ ಉಪಸ್ಥಿತರಿದ್ದರು. ಹಲವಾರು ಮಂದಿ ಪಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ಅಂಚೆ ಇಲಾಖೆಯ ಅಧಿಕಾರಿಗಳಾದ ಪ್ರಜ್ವಲ್ ಸಿ. ವಿ , ಸುರೇಶ್ ಬಡಿಗೆರ್, ವೈಷ್ಣವಿ ಅರ್. ಕೆ, ನವೀನ್ ಎಚ್. ಎಸ್ ಉಪಸ್ಥಿತರಿದ್ದರು. ಬಳಗದ ಮಾಜಿ ಅಧ್ಯಕ್ಷ ಪ್ರಸಾದ್ ಕೆ ಸ್ವಾಗತಿಸಿ, ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಲೋಕೇಶ್ ಕೆ ವಿ ವಂದಿಸಿದರು.










