ಪುತ್ತೂರಿನಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿ – ಸಮರೋಪಾದಿ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ

0

ಪುತ್ತೂರು:ಪುತ್ತೂರಿನಲ್ಲಿ ಈ ವರ್ಷದ ಮೊದಲ ಮಳೆಗೆ 150 ರಿಂದ 200 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು , ಮರಗಳು ಬಿದ್ದು ವಿದ್ಯುತ್ ತಂತಿಗಳು ತುಂಡಾದ ಕಾರಣ ಕಳೆದ ಮೂರು ದಿನಗಳಿಂದ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಾಗಿದೆ, ಎಲ್ಲೆಲ್ಲಿ ವಿದ್ಯುತ್ ಸಮಸ್ಯೆ ಇದೆಯೋ ಅಲ್ಲೆಲ್ಲಾ ಸ್ಪಂದಿಸುವ ಕೆಲಸವನ್ನು ಮೆಸ್ಕಾಂ ಸಿಬಂದಿಗಳು ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.


ಸೋಮವಾರ ಶಾಸಕರ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಲು ಮೆಸ್ಕಾಂ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಶಾಸಕರು ಸಮಸ್ಯೆ ಬಗ್ಗೆ ಪೂರ್ತಿ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಸಮಸ್ಯೆ ಸ್ಪಂದನೆಗೆಂದೆಏ ಎರಡು ಸೆಕ್ಷನ್‌ಗಳನ್ನು ಮಾಡಲಾಗಿದ್ದು ಒಂದುಸೆಕ್ಷನ್‌ನಲ್ಲಿ 60 ಮಂದಿ ಇದ್ದು ಒಟ್ಟು 120 ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕಾರ್ಯಪೃವೃತ್ತರಾಗಿದ್ದಾರೆ ಎಂದು ತಿಳಿಸಿದರು.


ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು, ಬೇರಿಕೆ, ಜಿಡೆಕಲ್ಲು, ಬಪ್ಪಳಿಗೆ , ಬಲ್ನಾಡು ಮತ್ತು ಜೈನರಗುರಿಯಲ್ಲಿ ಅತ್ಯಧಿಕ ಹಾನಿಯಾಗಿದೆ. ಹೆಚ್ಚಿನ ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ತಂತಿಗಳು ಕತ್ತರಿಸಿವೆ, ಅವುಗಳನ್ನು ಮರು ಜೋಡಿಸುವ ಕೆಲವನ್ನು ಮಾಡಲಾಗಿದೆ. ಎರಡು ಕಡೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಸಮಜೆಯೊಳಗೆ ದುರಸ್ಥಿ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಸ್ವಲ್ಪ ಸಮಸ್ಯೆ ಆಗಿದೆ
ಮಳೆಗಾಲ ಪ್ರಾರಂಭದಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಮೆಸ್ಕಾಂ ಇಲಾಖೆಯಲ್ಲಿ ಸಿಬಂದಿಗಳ ಕೊರತೆಯಿಲ್ಲ. ಬೇಸಿಗೆಯಲ್ಲಿ ಜೋತುಬಿದ್ದ ಕೇಬಲ್‌ಗಳು ಕೆಲವೊಮ್ಮೆ ಮಳೆ ಬರುವ ವೇಳೆ ಕಟ್ ಆಗುತ್ತದೆ ಈ ಕಾರಣಕ್ಕೆ ಶಾರ್ಟ್ ಆಗಿ ಕೆಲವು ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್ ಕೂಡಾ ಕೆಟ್ಟು ಹೋಗಿದೆ. ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅಲ್ಲಿಗೆಲ್ಲಾ ತೆರಳಿ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವಂತೆ ಮೆಸ್ಕಾಂ ಗೆ ಸೂಚನೆ ನೀಡಿರುವುದಾಗಿ ಶಾಸಕರು ತಿಳಿಸಿದರು. ವಿದ್ಯುತ್ ಇಲ್ಲದೆ ಕೆಲವೊಂದು ಕಡೆ ರೋಗಿಗಳಿಗೂ ತೊಂದರೆಯುಂಟಾಗಿದ್ದು ನನ್ನ ಗಮನಕ್ಕೆ ಬಂದಿದೆ. ಮುಮದೆ ಆರೀತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಮತೆ ಮೆಸ್ಕಾಂಗೆ ತಿಳಿಸಿದ್ದೇನೆ ಎಂದು ಹೇಳಿದರು.

ಈ ನಂಬರ್‌ಗೆ ಕರೆ ಮಾಡಿ
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾದಲ್ಲಿ ಸಾರ್ವಜನಿಕರು 08251-236393, 9480833013 ಗೆ ಕರೆ ಮಾಡಿ ಮಾಹಿತಿ ನೀಡಿ ಸಹಕರಿಸಿ
ಸಭೆಯಲ್ಲಿ ಮೆಸ್ಕಾಂ ಕಾಯಾನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಕುಂಬ್ರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಶಿವಶಂಕರ್, ಜೆ ಇ ಗಳಾದ ರಾಜೇಶ್, ದುರ್ಗಾಸಿಂಗ್ ಇದ್ದರು.

LEAVE A REPLY

Please enter your comment!
Please enter your name here