ಬೆಂಗಳೂರಿನ ಕರ್ನಾಟಕ ಗ್ರಹಮಂಡಳಿಯ ಕಟ್ಟಡದಲ್ಲಿ ಶ್ರೀ ನಾರಾಯಣ ಗುರು ನೂತನ ಕಚೇರಿ ಉದ್ಘಾಟನೆ

0

ಬಡಗನ್ನೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳ ಅಡಿಯಲ್ಲಿ ಮಂಜುನಾಥ ಪೂಜಾರಿ ಮುದ್ರಾಡಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕರ್ನಾಟಕ ಗ್ರಹ ಮಂಡಳಿಯ ಕಟ್ಟಡದಲ್ಲಿ ಸ್ಥಾಪಿತವಾದ ನಾರಾಯಣ ಗುರು ನಿಗಮದ ನೂತನ ಕಚೇರಿಯ ಉದ್ಘಾಟನೆ ನಡೆಯಿತು.

ಈ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವಾಧ್ಯಕ್ಷರುಗಳಾದ ಪೀತಾಂಬರ ಹೆರಾಜೆ, ರಾಜಶೇಖರ್ ಕೋಟ್ಯಾನ್, ಜಯಂತ ನಡುಬೈಲ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ  ಸಂಜೀವ ಪೂಜಾರಿ ಬಿರ್ವ, ಕಾರ್ಯದರ್ಶಿಗಳಾದ ಉಲ್ಲಾಸ್ ಕೋಟ್ಯಾನ್, ಡಾ. ರಾಜಾರಾಮ್, ಉಪಾಧ್ಯಕ್ಷ  ದೀಪಕ್ ಕೋಟ್ಯಾನ್ ಗುರುಪುರ, ವಾಸ್ತುತಜ್ಞ ಪ್ರಮಲ್ ಕುಮಾರ್ ಕಾರ್ಕಳ, ಜಯ ಸೂರ್ಯ ಸುವರ್ಣ ಮುಂಬೈ, ಹರೀಶ್ ಪೂಜಾರಿ ಕಟಪಾಡಿ, ಮುಂತಾದವರು ಭಾಗವಹಿಸಿ ಕ್ಷೇತ್ರದ ಪರವಾಗಿ ಅಧ್ಯಕ್ಷರಿಗೆ ಅಭಿನಂದನೆಯನ್ನು ಸಲ್ಲಿಸಿದರು.

 ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಂ ವಿರಪ್ಪ ಮೊಯ್ಲಿ ರವರು ಉದ್ಘಾಟಿಸಿದ್ದು, ಮುಖ್ಯ ಅಭ್ಯಾಗತರಾಗಿ ಯುಟಿ ಖಾದರ್, ಮಧು ಬಂಗಾರಪ್ಪ, ರಮನಾಥ ರೈ,  ವಿನಯ್ ಕುಮಾರ್ ಸೊರಕೆ, ರಕ್ಷಿತ್ ಶಿವರಾಮ್, ತುಳಸಿ ಮದ್ದನೀನಿ, ರಾಜೀವ್ ಕೋಲೆರಾ , ದಿನೇಶ್ ಅಮೀನ್ ಮಟ್ಟು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here