







ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಾಲೆಗಳ ಕನ್ನಡ ವಿಷಯ ಬೋಧನಾ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಕಾರ್ಯಾಗಾರದ ಉದ್ಘಾಟನೆಯನ್ನು ಖ್ಯಾತ ಸಂಶೋಧನ ಪ್ರಾಧ್ಯಾಪಕ ಡಾ.ರಾಜೇಶ್ ಬೆಜ್ಜಂಗಳ ನೆರವೇರಿಸಿದರು.



ಬಳಿಕ ನಡೆದ ಸರಸ್ವತಿ ವಂದನಾದಲ್ಲಿ ಎಲ್ಲಾ ತರಬೇತುದಾರ ಶಿಕ್ಷಕರು ಭಾಗವಹಿಸಿದರು.ತದನಂತರ ನಡೆದ ಸರಳ ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಯೋಜಕ ಶ್ರೀ ರಘುರಾಜ್ ಉಬರಡ್ಕ ಮಾತನಾಡಿ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಕನ್ನಡದ ಆಸ್ತಿತ್ವ ದಕ್ಕೆ ಬಂದಿದೆ.ಇದರಿಂದ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯದ ಹಿಡಿತ ಗೌಣವಾಗುತ್ತಿದೆ.ನಮ್ಮ ವಿದ್ಯಾರ್ಥಿಗಳು ಕನ್ನಡದ ಲೇಖಕರಾಗಿ,ಕವಿಗಳಾಗಿ,ವಿಮರ್ಶಕರಾಗಿ ಹೊರಹೊಮ್ಮುವಂತೆ ನಮ್ಮ ಪ್ರಯತ್ನ ನಡೆಯಬೇಕಾಗಿದೆ.ಈ ಕಾರ್ಯಾಗಾರ ಇಂತಹ ಸ್ಫೂರ್ತಿಯನ್ನು ತುಂಬಲಿ ಎಂದು ಶುಭಹಾರೈಸಿದರು.



ತದನಂತರ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಡಾ.ರಾಜೇಶ್ ಬೆಜ್ಜoಗಳ ಇವರು ‘ವ್ಯಾಕಾರಣಾಂಶ’ ಎಂಬ ವಿಷಯದ ಕುರಿತಾಗಿ ವಿಷಯ ಜ್ಞಾನವನ್ನು ನೀಡಿದರು.
ಕಾರ್ಯಾಗಾರದ ಉದ್ಘಾಟನೆಯಲ್ಲಿ ಕನ್ನಡ ವಿಷಯ ತರಬೇತಿ ಸಂಯೋಜಕಿ ಶ್ರಿಮತಿ ಸುಮಲತಾ ಈಶ್ವರಮಂಗಳ ಶಾಲೆ ಉಪಸ್ಥಿತರಿದ್ದರು.ಸ್ವಾಗತ ವನ್ನು ಮಾತಾಜಿ ಪೂರ್ಣಿಮಾ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ನೆರವೇರಿಸಿದರು. ಮಾತಾಜಿ ಅನುಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಳ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.ಮಾತಾಜಿ ಸುಶ್ಮಿತಾ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.










