






ಪುತ್ತೂರು: ಪುತ್ತೂರು ಮರಿಲಿನಲ್ಲಿರುವ ಪುತ್ತೂರು ಕ್ಲಬ್ನಲ್ಲಿ ಮೇ 25ರಂದು ಸುರುತಾಲ ಸರ್ಗಂ ಕರೋಕೆ ಸ್ಟುಡಿಯೋ ಉದ್ಘಾಟನೆಗೊಂಡಿತು.


ಸ್ಟುಡಿಯೋವನ್ನು ಉದ್ಘಾಟಿಸಲು ಆಗಮಿಸಿದ್ದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಮತ್ತು ಕಂಪೋಸರ್ ಗುರು ಕಿರಣ್ ಅವರು ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ವಿದುಷಿ ಪವಿತ್ರ ರೂಪೇಶ್ ಅವರನ್ನು ಗೌರವಿಸಿ ಸನ್ಮಾನಿಸಿದರು.



ಸಂಗೀತ ಕ್ಷೇತ್ರಕ್ಕೆ ಪವಿತ್ರ ರೂಪೇಶ್ ಅವರ ಕೊಡುಗೆಯನ್ನು ಶ್ಲಾಘಿಸಿದ ಗುರು ಕಿರಣ್, ಅವರ ಸಾಧನೆ ಇತರರಿಗೆ ಮಾದರಿ ಎಂದು ಹೇಳಿದರು.










