






ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಜಾಲು ನಿವಾಸಿ ನಾರಾಯಣ ಪಾಟಾಳಿ (65 ವರ್ಷ) ಅವರು ಜೂ. 2ರಂದು ಹೃದಯಘಾತದಿಂದ ನಿಧನರಾದರು.


ಇವರು ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶೀಲಾವತಿ, ಮಕ್ಕಳಾದ ಪ್ರವೀಣ್, ಪ್ರದೀಪ್ ಹಾಗೂ ಸೊಸೆ , ಇಬ್ಬರು ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.













