ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ  ಪ್ರಾರಂಭೋತ್ಸವ- ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

0

ನಿಡ್ಪಳ್ಳಿ: ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ 2026-27 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಜೂ.1ರಂದು ನಡೆಯಿತು. ಶಾಲೆಗೆ ಹೊಸದಾಗಿ ದಾಖಲಾತಿ ಪಡೆದ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು ಬಹಳ ಸಂಭ್ರಮ ಸಡಗರದಿಂದ ಬ್ಯಾಂಡ್ ವಾದ್ಯಗಳ ಮೂಲಕ ಆರತಿ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಬರಮಾಡಿಕೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ; ಬಳಿಕ ನಡೆದ ಪೋಷಕರ ಸಭೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ  ಚಂದ್ರಕಲಾ ಕೆ.ವಿ ರವರು ವಿದ್ಯಾರ್ಥಿಗಳಿಗೆ ಶಾಲಾ ನೀತಿ ನಿಯಮಗಳ ಪಾಲನೆಯ ಬಗ್ಗೆ ತಿಳಿಸಿದರು. ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಮಾಧವ ಪೂಜಾರಿಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಖ್ಯಾತ ವೈದ್ಯೆ ಡಾ.ಆಶಾ ಪುತ್ತೂರಾಯರ ಸಹೋದರ ಉದಯಕುಮಾರ್ ರವರ ಪುತ್ರಿ ಕರ್ನಾಟಕ ಬ್ಯಾಂಕ್ ಉದ್ಯೋಗಿ ನಿಧಿ  ಯು.ಆರ್ ರವರು ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆಯಾಗಿ ನೀಡಿದರು. ಇಲಾಖಾ ವತಿಯಿಂದ ನೀಡಿದ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಎಸ್‌ ಡಿ ಎಂ ಸಿ ಸದಸ್ಯರುಗಳಾದ ಶಶಿಕಲಾ ಮತ್ತು ಶಿವಪ್ಪ ಗೌಡ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ವಿಜಯಕುಮಾರ್.ಎಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹ ಶಿಕ್ಷಕಿ ಮಂಜುಳಾ ಭಟ್ ವಂದಿಸಿದರು. ಶಿಕ್ಷಕಿ ಕುಮಾರಿ ಉಮಾ ಪಿ. ಅರ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರದ ಸಿಂಧು ಕೆ ವಿ ಮತ್ತು ವಿನುತ ಸಿ ಕೆ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here