ಬೊಬ್ಬೆಕೇರಿ ಶಾಲಾ ಮಕ್ಕಳಿಗೆ ಮುಂಬೈ ಕಲ್ಯಾಣ್ ಓಂ ಶಕ್ತಿ ಮಹಿಳಾ ಸಂಘದಿಂದ ನೋಟ್ ಪುಸ್ತಕ ವಿತರಣೆ

0

ಕಾಣಿಯೂರು: ಓಂ ಶಕ್ತಿ ಮಹಿಳಾ ಸಂಘ ಕಲ್ಯಾಣ್ ಮುಂಬೈ ಇವರು ದೇವಿಪ್ರಸಾದ್ ರೈ ಗೆಜ್ಜೆ ಹಾಗೂ ಉದಯ ಕುಮಾರ್ ರೈ ನಾಗನಕಜೆಯವರ ನೇತೃತ್ವದಲ್ಲಿ ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿರುವ ನೋಟ್ ಪುಸ್ತಕಗಳನ್ನು ನಿವೃತ್ತ ಮುಖ್ಯಶಿಕ್ಷಕ ಸಂಜೀವ ರೈ ಪೈಕ ಅವರು ಜೂ 10ರಂದು ವಿದ್ಯಾರ್ಥಿಗಳಿಗೆ ವಿತರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್, ಶಾಲಾ ಮುಖ್ಯಗುರು ಶಶಿಕಲಾ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಅನಂತ ಕುಮಾರ್ ಬೈಲಂಗಡಿ, ಎಸ್ ಡಿ ಎಂ ಸಿ ಸದಸ್ಯ ಸುಧಾಕರ್ ಕಾಣಿಯೂರು, ಬೊಬ್ಬೆಕೇರಿ ಅಂಗನವಾಡಿ ಕಾರ್ಯಕರ್ತೆ ಭವಾನಿ, ಸುಲಕ್ಷಣ್ ರೈ ಪೈಕ, ಶಿಕ್ಷಕರಾದ ಜನಾರ್ದನ ಹೇಮಳ, ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here