






ನಾಯಕಿ: ಆರಾಧ್ಯ ಎಸ್. ಆಳ್ವ, ಉಪನಾಯಕಿ: ರೊಯಿಲ್ಲಿನ್ ಆಂಜೆಲಾ ರೆಬೆಲ್ಲೊ


ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಶಾಲಾ ನಾಯಕಿ ಮತ್ತು ಉಪನಾಯಕಿಯ ಚುನಾವಣೆಯು ಜೂ.10 ರಂದು ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಯಿತು.



ಶಾಲಾ ನಾಯಕಿ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಹಾಗೂ ಶಾಲಾ ಉಪನಾಯಕಿ ಸ್ಥಾನಕ್ಕೆ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ನಾಯಕಿಯಾಗಿ 10ನೇ ತರಗತಿಯ ಕು| ಆರಾಧ್ಯ ಎಸ್. ಆಳ್ವ (ವಿವೇಕ್ ಆಳ್ವ ಮತ್ತು ಸ್ಮಿತಾ ಆಳ್ವ ದಂಪತಿ ಪುತ್ರಿ) ಹಾಗೂ ಶಾಲಾ ಉಪನಾಯಕಿಯಾಗಿ 9ನೇ ತರಗತಿಯ ಕು| ರೊಯಿಲ್ಲಿನ್ ಆಂಜೆಲಾ ರೆಬೆಲ್ಲೊ (ರೊನಾಲ್ಡ್ ರೆಬೆಲ್ಲೊ ಮತ್ತು ಶಾಂತಿ ರೆಬೆಲ್ಲೊ ದಂಪತಿ ಪುತ್ರಿ) ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಕ- ಶಿಕ್ಷಕೇತರರ ಸಹಕಾರದೊಂದಿಗೆ ಚುನಾವಣೆ ನಡೆಸಲಾಯಿತು.










